ಬೈಲಹೊಂಗಲ ನಗರದಲ್ಲಿ ನಿರ್ಮಾಣವಾಗುತ್ತಿರುವ ಬಾರ್-ರೆಸ್ಟೋರೆಂಟ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿ ಸಾರ್ವಜನಿಕರು ತಹಸೀಲ್ದಾರ್ ಹನುಮಂತ ಶಿರಹಟ್ಟಿಗೆ ಮನವಿ ಸಲ್ಲಿಸಿದರು. ಬಸವರಾಜ ಜನ್ಮಟ್ಟಿ, ವಿಜಯ ಬೋಳನ್ನವರ, ಅನಿಲ ಮೆಟಗುಡ್ಡ, ರಾಜೇಂದ್ರ ಸಂಗೊಳ್ಳಿ ಇತರರಿದ್ದರು. 
ಬೆಳಗಾವಿ

ಬಾರ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ಚನ್ನಬಸಪ್ಪ ಬಾಳಪ್ಪ ರೊಟ್ಟಿ
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಇಲ್ಲಿನ ಮೃತ್ಯುಂಜಯ ನಗರದ ಚನ್ನಮ್ಮ ಬ್ಯಾಂಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಬಾರ್-ರೆಸ್ಟೋರೆಂಟ್ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಪೌರಾಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ವಿಜಯ ಬೋಳನ್ನವರ ಮಾತನಾಡಿ, ಮೃತ್ಯುಂಜಯ ನಗರ ಜನವಸತಿ ಪ್ರದೇಶವಾಗಿದೆ. ಪ್ರತಿದಿನ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ದೈನಂದಿನ ಕಾರ್ಯಗಳಿಗೆ ತೆರಳುವ ಮಹಿಳೆಯರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ, ಈ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಿದರೆ ನಿವಾಸಿಗಳ ನೆಮ್ಮದಿ ಹಾಗೂ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಅನಿಲ ಮೆಟಗುಡ್ಡ, ರಾಜೇಂದ್ರ ಸಂಗೊಳ್ಳಿ ಮಾತನಾಡಿ, ಬಾರ್ ಪ್ರಾರಂಭವಾದರೆ ಅನಗತ್ಯ ಜಗಳ-ಗಲಾಟೆ, ಸಂಚಾರ ಸಿಕ್ಕು ಉಂಟಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಓಡಾಡಲು ತೊಂದರೆಯಾಗುತ್ತದೆ. ಈಗಾಗಲೇ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದರೂ, ಕಟ್ಟಡ ಕಾಮಗಾರಿ ಮುಂದುವರಿದಿದೆ. ಕೂಡಲೇ ಬಾರ್-ರೆಸ್ಟೋರೆಂಟ್ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಸಂತೋಷ ಪಾಟೀಲ, ಬಸವರಾಜ ಮೇಲಿನಮನಿ, ವಿರೂಪಾಕ್ಷ ಬಡ್ಡಿಮನಿ, ಅರುಣ ದೇಸಾಯಿ, ಸಂತೋಷ ಉಪ್ಪಿನ, ಪ್ರಶಾಂತ ಉಪ್ಪಿನ, ಅಶೋಕ ಮಜಗನ್ನವರ, ಬಸವರಾಜ ಕಪ್ಪಣ್ಣವರ, ಆನಂದ ಕೊಣ್ಣೂರಮಠ, ಅಮರೇಶ ಹೊಸಮಠ, ಬಬಲಿ ಹಿರೇಮಠ, ಮಹಾಂತೇಶ ಕಿಲ್ಲೇದಾರ, ಮಹಾಂತೇಶ ರಾಮಣ್ಣವರ, ಪ್ರಕಾಶ ಹಲಮಣ್ಣವರ, ನಾಗರಾಜ ಹಲಮಣ್ಣವರ, ಗುರು ಕಾಟಕರ, ಪ್ರಭಾಕರ ಪೋಣಣ್ಣವರ, ಗಿರೀಶ ಪೋಣಣ್ಣವರ, ಮಹಾಂತೇಶ ಕೂಡಲಗಿಮಠ, ಪ್ರಕಾಶ ಕಣ್ಣೂರಳ್ಳಿ, ಪರಮೇಶ್ವರ ರಾಮಣ್ಣವರ ಹಾಗೂ ಮೃತ್ಯುಂಜಯ ನಗರದ ನಿವಾಸಿಗಳು ಇದ್ದರು.