ಬೆಳಗಾವಿಯಲ್ಲಿ ಶುಕ್ರವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆಯಿಂದ ಪ್ರತಿಭಟಿಸಲಾಯಿತು.
ಬೆಳಗಾವಿ: ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿನ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸರ್ಕಾರ ಆದ್ಯತೆ ಮೇರೆಗೆ ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶನಿವಾರ ಕಿತ್ತೂರು ಕರ್ನಾಟಕ ಸೇನೆಯಿಂದ ಪ್ರತಿಭಟಿಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಹೆಸರಿನಲ್ಲಿದ್ದ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಪ್ರಮುಖ ವೃತ್ತವೊಂದರಲ್ಲಿ ಇಮ್ಮಡಿ ಪುಲಕೇಶಿ ಹಾಗೂ ಆರ್‌ಪಿಡಿ ಕಾಲೇಜ್ ವೃತ್ತದಲ್ಲಿ ಮದಕರಿ ನಾಯಕ ಮೂರ್ತಿ ಪ್ರತಿಷ್ಠಾಪಿಸಬೇಕು. ಎಂಇಎಸ್‌ನ ಶುಭಂ ಶಳಕೆ ಮತ್ತು ಸಂಗಡಿಗರನ್ನು ಬೆಳಗಾವಿಯಿಂದ ಶಾಶ್ವತವಾಗಿ ಗಡಿಪಾರು ಮಾಡಿ, ಕನ್ನಡ ಮತ್ತು ಮರಾಠಿಗರು ಶಾಂತತೆಯಿಂದ ಇರಲು ಅನುವು ಮಾಡಿಕೊಡಬೇಕು. ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯವಾಗಿ ಜಾರಿಗೆ ಬರಬೇಕು. ಗಡಿಭಾಗದ ಹಳೇ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಮರಕುಂಬಿ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಕಾರ್ಖಾನೆಯಿಂದ ತಲಾ 1 ಕೋಟಿ ರೂ. ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಯುವ ಘಟಕದ ರಾಜ್ಯ ಅಧ್ಯಕ್ಷ ಮಹೇಶ ಶೀಗಿಹಳ್ಳಿ, ಮಂಗೇಶ ಚನ್ನಿಕುಪ್ಪಿ, ಈರೇಶ ನಾಯಕ, ಕಾರ್ತಿಕ ಪಾಟೀಲ, ಲಕ್ಷ್ಮಣ ಬಾಗಡಿ, ಸುಬೋಧ ಜಕಾತಿ, ಪರಶುರಾಮ ದರವೇಶಿ, ರಾಮ ಪೂಜಾರಿ, ಶಿವು ಕರಡಿಗುಡ್ಡ, ಮಂಜು ತಳವಾರ, ಗಣೇಶ ನಾಯಕ, ಸುನೀಲ ಬಾಳಣ್ಣವರ ಇತರರಿದ್ದರು.