ರಾಯಬಾಗ ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ತಾಲೂಕಿನ ಅನುದಾನಿತ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ಗಳನ್ನು ಹಣಮಂತ ನಿರಾಣಿ ಹಾಗೂ ಡಿ.ಎಂ.ಐಹೊಳೆ ವಿತರಿಸಿದರು. ಆರ್.ಸೀತಾರಾಮು, ಬಸವರಾಜಪ್ಪ ಆರ್., ಜಿನೇಂದ್ರ ನಿಲಜಗಿ ಇತರರಿದ್ದರು.
- ಹಣಮಂತ ನಿರಾಣಿ ಭರವಸೆ ಕಂಪ್ಯೂಟರ್
- ಸ್ಕಾೃನರ್, ಪ್ರಿಂಟರ್ ವಿತರಣೆ
ರಾಯಬಾಗ: ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯ ಸೌಲಭ್ಯ ಮರು ಜಾರಿಗೊಳಿಸಲು ಮೇಲ್ಮನೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಸೋಮವಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಅನುದಾನಿತ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ವಿತರಿಸಿ ಮಾತನಾಡಿ, ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡದೇ ಇರುವುದರಿಂದ ಸರ್ಕಾರ ಹೇಳುವ ಶೇ.100 ಪರೀಕ್ಷೆ ಲಿತಾಂಶ ಪಡೆಯುವುದು ಅಸಾಧ್ಯ. ಶಿಕ್ಷಕರ ಎಲ್ಲ ಬೇಡಿಕೆ ಸದನದಲ್ಲಿ ಪ್ರಸ್ತಾಪಿಸಿ, ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶ ಹೆಚ್ಚಿಸಲು ಶಿಕ್ಷಕರ ಮೇಲಿನ ಒತ್ತಡ ಕಡಿಮೆಮಾಡಬೇಕೆಂದು ಒತ್ತಾಯಿಸಿ ಶಿಕ್ಷಕರ ಸಂಘಟನೆಯಿಂದ ಹಣಮಂತ ನಿರಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್., ಎಲ್.ಬಿ.ಚೌಗುಲೆ, ಪೃಥ್ವಿರಾಜ ಜಾಧವ,
ಎಸ್.ಎಸ್.ಮಠದ, ರಾಮು ಹೂಗಾರ, ವಿ.ಎಸ್.ಪೂಜಾರಿ, ಬಸವರಾಜ ಯಲಶೆಟ್ಟಿ, ಬಸವರಾಜ ಕಾಂಬಳೆ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಖೆಮಲಾಪೂರೆ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ಕರೆಪ್ಪ ನಾಯಿಕ ಇತರರಿದ್ದರು.
ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯಲಾಗುವುದು. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು.