ಮೊರಬದಲ್ಲಿ ಮೊಹರಂ ನಿಮಿತ್ತ ಏರ್ಪಡಿಸಿದ್ದ ಜೋಡೆತ್ತಿನ ಶರ್ಯತ್ತು ವಿಜೇತರಿಗೆ ರಾಹುಲ ಜಾರಕಿಹೊಳಿ ಬಹುಮಾನ ವಿತರಿಸಿದರು. ಆರ್.ಎಸ್.ಶಿರಗಾಂವೆ, ಮಲ್ಲೇಶ ಶಾಂಡಗೆ, ಎಂ.ಬಿ.ಸಾಯಣ್ಣವರ ಇತರರಿದ್ದರು. 
ಬೆಳಗಾವಿ

ಶರ್ಯತ್ತು ವಿಜೇತರಿಗೆ ಬಹುಮಾನ

ರಾಯಬಾಗ: ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಮೊಹರಂ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಹೇಳಿದರು.
ತಾಲೂಕಿನ ಮೊರಬ ಗ್ರಾಮದಲ್ಲಿ ಮೊಹರಂ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಜೋಡು ಎತ್ತಿನ ಗಾಡಿ ಶರ್ಯತ್ತಿನಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಹಬ್ಬ, ಜಾತ್ರೆ ಸಂದರ್ಭಗಳಲ್ಲಿ ಗ್ರಾಮೀಣ ಸ್ಪರ್ಧೆಗಳು ಕಾಣಸಿಗುತ್ತಿರುವುದು ವಿಶೇಷ. ಶರ್ಯತ್ತು ರೈತರ ಪರಿಶ್ರಮ ತೋರಿಸುತ್ತದೆ ಎಂದರು.
ಬಡಚಿ ಗ್ರಾಮದ ಸಂತೋಷ ಲೆಂಡೆ 1 ಲಕ್ಷ ರೂ. ಬಹುಮಾನದೊಂದಿಗೆ ಪ್ರಥಮ, ಚಿಂಚಲಿಯ ಮಹಾವೀರ ಕೋಳಿ 70 ಸಾವಿರ ರೂ. ಬಹುಮಾನದೊಂದಿಗೆ ದ್ವಿತೀಯ, 50 ಸಾವಿರ ರೂ. ಬಹುಮಾನದೊಂದಿಗೆ ಅಲಖನೂರಿನ ಶಿವಾನಂದ ಪೂಜಾರಿ ತೃತೀಯ, ಕಡಲಗಿಯ ರಾಹುಲ ದೇಸಾಯಿ 30 ಸಾವಿರ ರೂ.ದೊಂದಿಗೆ ಚತುರ್ಥ ಬಹುಮಾನ ಪಡೆದುಕೊಂಡರು. ಆರ್.ಎಸ್.ಶಿರಗಾಂವೆ, ಮಲ್ಲೇಶ ಶಾಂಡಗೆ, ಎಂ.ಬಿ.ಸಾಯಣ್ಣವರ, ನೀಲೇಶ ಪಾಟೀಲ, ರಾಮು ಕಾರತಗೆ, ಮಾಯಪ್ಪ ಕಾರತಗೆ, ಮಾರುತಿ ಪಾಟೀಲ, ರಮೇಶ ಪಾಟೀಲ, ಸಂತೋಷ ಶಾಂಡಗೆ, ವಿಠ್ಠಲ ಮೂಡಲಗಿ ಇತರರು ಇದ್ದರು.