ಜಲಾಲಪುರ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಶರ್ಯತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಸಗೌಡ ಪಾಟೀಲ, ಮಲ್ಲು ಮುರಚಿಟ್ಟೆ ಇತರರಿದ್ದರು. 
ಬೆಳಗಾವಿ

ಶರ್ಯತ್ತು ವಿಜೇತರಿಗೆ ಬಹುಮಾನ

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮದ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಶರ್ಯತ್ತು ವಿಜೇತರಿಗೆ ಬುಧವಾರ ಬಹುಮಾನ ವಿತರಿಸಲಾಯಿತು.
ಜೋಡು ಎತ್ತಿನ ಗಾಡಿ ಶರ್ಯತ್ತು: ಜಲಾಲಪುರದ ವಸಂತ ಹವಾಲ್ದಾರ್‌ಪ್ರಥಮ, ಭಿರಡಿಯ ತಾಯಿಬಾಯಿ ಪ್ರಸನ್ನ ದ್ವಿತೀಯ ಮತ್ತು ಅಕ್ಷಯ ಪೂಜಾರಿ ತೃತೀಯ
ಬಹುಮಾನ ಪಡೆದರು.
ಜೋಡು ಕುದುರೆ ಗಾಡಿ ಶರ್ಯತ್ತು: ಭಿರಡಿಯ ರಾಮಚಂದ್ರ ಗೌಳಿ ಪ್ರಥಮ, ಮಹಾದೇವ ಈಟೇಕರಿ ದ್ವಿತೀಯ ಮತ್ತು ಲಗಮಣ್ಣ ಹಿಡಕಲ್ಲ ತೃತೀಯ ಬಹುಮಾನ ಪಡೆದರು.
ಕುದುರೆ ಶರ್ಯತ್ತು: ಚಿಂಚಲಿಯ ಕುಮಾರ ಪೂಜಾರಿ ಪ್ರಥಮ, ಕಲ್ಲಪ್ಪ ಖಿಲಾರೆ ದ್ವಿತೀಯ ಹಾಗೂ ಸುರೇಶ ಚಿಂಚಲಿ ತೃತೀಯ
ಬಹುಮಾನ ಪಡೆದರು.
ಬಸಗೌಡ ಪಾಟೀಲ, ಮಲ್ಲು ಮುರಚಿಟ್ಟೆ, ಬಂಡು ಹವಾಲ್ದಾರ್, ರಾವಸಾಹೇಬ ಹೇರವಾಡೆ, ರಾಜು ಜಾಧವ, ಸಾವಂತ ಪಾಟೀಲ,
ರಘುನಾಥ ಶೇಲಾರ, ಪ್ರಕಾಶ ನಿಂಬಾಳ್ಕರ್ ಸೇರಿದಂತೆ ಇತರರು ಇದ್ದರು.