ಅಂಕಲಿ ಗ್ರಾಮದ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಎತ್ತಿನಗಾಡಿ ಶರ್ಯತ್ತು ವಿಜೇತರಿಗೆ ಬಹುಮಾನ ವಿತರಿಸಲಾಯತು. ರಣಜಿತ ಶಿರಶೇಟ, ಜಾತೆಪ್ಪ ಕೊಂಕಣಿ, ಪಾಂಡುರಂಗ ವಡ್ಡರ ಇತರರಿದ್ದರು.
ನೇಜ ಗ್ರಾಮದಲ್ಲಿ ಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಪ್ರಮೋದ ಡೋಗರೆ ಪ್ರಥಮ, ಸಚಿನ ಖೋತ ದ್ವಿತೀಯ, ದಯಾನಂದ ಕಲ್ಲೇದಾರ ತೃತೀಯ ಬಹುಮಾನ ಪಡೆದರು. ಕುದುರೆ ಗಾಡಿ ಶರ್ಯತ್ತಿನಲ್ಲಿ ಲಗಮಣ್ಣ ಪ್ರಥಮ, ಸಾಗರ ಗೌಂಡಿ ದ್ವಿತೀಯ, ದತ್ತಾ ಮಾಳಿ ತೃತೀಯ ಸ್ಥಾನ ಪಡೆದರು. ಒಂದು ಕುದುರೆ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಸೋಹಲ ಸಾಂಗಾವ ಪ್ರಥಮ, ಪೋಪಟ ದತವಾಡೆ ದ್ವಿತೀಯ, ಬಾಹುಬಲಿ ಚೌಗುಲೆ ದತವಾಡ ತೃತೀಯ ಸ್ಥಾನ ಪಡೆದರು.
ಶಿರಗಾಂವವಾಡಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ಯತ್ತಿನಲ್ಲಿ ನಾಗೇಶ ಚಿಕ್ಕೋಡಿ ಪ್ರಥಮ, ವಿಶಾಲ ದೇಸಾಯಿ ದ್ವಿತೀಯ, ವಿನಾಯಕ ಉಚಗಾಂವೆ ತೃತೀಯ ಸ್ಥಾನ ಪಡೆದರು. ಬ ಗುಂಪಿನಲ್ಲಿ ವಿನಾಯಕ ಉಚಗಾಂವೆ ಪ್ರಥಮ, ನಿಖಿಲ ವಂಜಾರೆ ದ್ವಿತೀಯ ಮತ್ತು ಬಸವರಾಜ ಮಗದುಮ್ಮ ತೃತೀಯ ಸ್ಥಾನ ಪಡೆದರು.
ಕುದುರೆ ಶರ್ಯತ್ತಿನಲ್ಲಿ ಗಬ್ಬರ್ ಪ್ರಥಮ, ಹೀರಾ ದ್ವಿತೀಯ, ತಾಶೀಲ್ದಾರ್ ತೃತೀಯ, ಸೈಕಲ್ ಶರ್ಯತ್ತಿನಲ್ಲಿ ಬಸು ಹಿರೇಮಠ ಪ್ರಥಮ, ಬಂಡಾ ಸ್ವಾಮಿ ದ್ವಿತೀಯ, ದರ್ಶನ ನಾಯಿಕ ತೃತೀಯ ಸ್ಥಾನ ಪಡೆದರು. ಓಡುವ ಸ್ಪರ್ಧೆಯಲ್ಲಿ ರೋಹನ ಲೋಹಾರ ಪ್ರಥಮ, ಸಮ್ಮೇದ ಬೇಡಕಿಹಾಳೆ ದ್ವಿತೀಯ ಮತ್ತು ಗಣೇಶ ಹನಬರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಗ್ರಾಮದ ಸಿದ್ಧೇಶ್ವರ ಮಂದಿರದಲ್ಲಿ ಕಮಿಟಿ ವತಿಯಿಂದ ಬಹುಮಾನ ವಿತರಿಸಲಾಯಿತು.