ಢೋಣೆವಾಡಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಾಳಾಸಾಹೇಬ ಕದಂ ಭೂಮಿಪೂಜೆ ನೆರವೇರಿಸಿದರು. ರಾಮಗೊಂಡ ಪಾಟೀಲ, ಪವನ ಪಾಟೀಲ ಇತರರಿದ್ದರು. 
ಬೆಳಗಾವಿ

ಮೂಲ ಸೌಕರ್ಯ ಕಲ್ಪಿಸಲು ಪ್ರಥಮಾದ್ಯತೆ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಬಾಳಾಸಾಹೇಬ ಹೇಳಿಕೆ
  • ರಸ್ತೆ ಕಾಮಗಾರಿಗೆ ಭೂಮಿಪೂಜೆ
ಬೋರಗಾಂವ: ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಜತೆಗೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವ ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯ ಮಾದರಿಯಾಗಿದೆ ಎಂದು ಬಿಜೆಪಿ ಗ್ರಾಮೀಣ ಘಟಕದ ತಾಲೂಕಾಧ್ಯಕ್ಷ ಬಾಳಾಸಾಹೇಬ ಕದಂ ಹೇಳಿದರು.
ಸಮೀಪದ ಢೋಣೆವಾಡಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಎಲ್ಲ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯೋಣ ಎಂದರು.
ಮುಖಂಡ ಶಿವಾಜಿ ಖೋತ ಮಾತನಾಡಿ, ಢೋಣೆವಾಡಿ-ಕಸನಾಳ ರಸ್ತೆಯಿಂದ ದತ್ತ ಮಂದಿರವರೆಗಿನ ರಸ್ತೆಗೆ ೨೫ ಲಕ್ಷ ರೂ.ಅನುದಾನ ಮಂಜೂರಾಗಿದ್ದು, ರಸ್ತೆ ನಿರ್ಮಾಣದಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ರಾಮಗೊಂಡ ಪಾಟೀಲ, ದೇವಪ್ಪ ದೇವಕಾತೆ, ಯೂನಸ್ ಮುಲ್ತಾನಿ, ಗ್ರಾಪಂ ಸದಸ್ಯೆ ಸುರೇಖಾ ಪಾಟೀಲ, ಶಾಂತಿನಾಥ ಕೋಲೆ, ಬಾಬುರಾವ್ ಮಾಳಿ, ಮಹಾಂತೇಶ ಸದಲಗೆ, ನಿತೇಶ ಜಾಧವ, ದತ್ತಾ ಗುರವ, ತುಕಾರಾಮ ಮಾಳಿ, ಸಖಾರಾಮ ನಾಗರಾಳೆ, ಜನಾರ್ದನ ಘಾಟಗೆ, ಅರವಿಂದ ಪಾಟೀಲ, ರಾಜು ಮಾಳಿ, ಮಹಿಪತಿ ಖೋತ, ಪಿಂಟು ಜಮಾದಾರ, ಸಾತಪ್ಪ ಕಳವೆ, ಕರಿಯಪ್ಪ ಗಾವಡೆ, ಕರಣ ಸದಲಗೆ, ದೀಪಕ ಮಾಳಿ, ಮಹಾಲಿಂಗ ಸೂರ್ಯಾವಂಶಿ ಇತರರಿದ್ದರು.