ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪಿಂಟು ಕಾಂಬಳೆ ಚಾಲನೆ ನೀಡಿದರು. ಉತ್ತಮ ಪಾಟೀಲ, ಭಾರತಿ ವಾಸವಾಡೆ, ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ಮ, ಶೋಭಾ ಹವಲೆ ಇತರರಿದ್ದರು. 
ಬೆಳಗಾವಿ

ಮೂಲಸೌಲಭ್ಯ ಒದಗಿಸಲು ಆದ್ಯತೆ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಪಾಟೀಲ ಭರವಸೆ
  • ವಿವಿಧ ಕಾಮಗಾರಿಗೆ ಚಾಲನೆ
ಬೋರಗಾಂವ: ಪಟ್ಟಣ ಅಭಿವೃದ್ಧಿಯತ್ತ ಸಾಗಬೇಕಾದರೆ, ಮೂಲಸೌಲಭ್ಯಗಳಿಗೆ ಆದ್ಯತೆ ನೀಡುವುದು ಅವಶ್ಯ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು. 
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣ ಪಂಚಾಯಿತಿಯ ವಿಶೇಷ ಅನುದಾನದ ಮೂಲಕ ಪ್ರತಿ ವಾರ್ಡ್ನಲ್ಲಿ ನೀರು, ರಸ್ತೆ, ಒಳಚರಂಡಿ, ವಿದ್ಯುತ್, ನೈರ್ಮಲ್ಯ, ಆರೋಗ್ಯ ಸೇವೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.  
ಪಪಂ ಅಧ್ಯಕ್ಷ ಪಿಂಟು ಕಾಂಬಳೆ ಕಾಮಗಾರಿಗೆ ಚಾಲನೆ ನೀಡಿದರು. ಪಪಂ ಸದಸ್ಯ ಅಭಯಕುಮಾರ ಮಗದುಮ್ಮ ಮಾತನಾಡಿ, ಪಪಂ ೧೫ನೇ ಹಣಕಾಸು ಯೋಜನೆಯಡಿ ವಠಾರೆ, ಚಿಪ್ರೆ ಹಾಗೂ ಮಡಿವಾಳ ಬಡಾವಣೆಯಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ೬ ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು.
ಪಪಂ ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸದಸ್ಯ ಅಭಯಕುಮಾರ ಮಗದುಮ್ಮ, ಪ್ರದೀಪ ಮಾಳಿ, ಶೋಭಾ ಹವಲೆ, ಮಾಣಿಕ ಕುಂಬಾರ, ತುಳಸಿದಾಸ ವಸವಾಡೆ, ದಿಗಂಬರ ಕಾಂಬಳೆ, ಅಶ್ವಿನಿ ಪವಾರ, ವರ್ಷಾ ಮನಗುತ್ತೆ, ಗಿರಿಜಾ ವಠಾರೆ, ಸುವರ್ಣಾ ಸೋಬಾನೆ, ಸಂಗೀತಾ ಶಿಂಗೆ, ರಾಜು ಮಗದುಮ್ಮ, ಅಶೋಕ ವಠಾರೆ, ಬಾಬಾಸೊ ವಠಾರೆ, ಸುರೇಶ ಮಡಿವಾಳ, ಮಹಾದೇವ ಮಡಿವಾಳ, ಅಜಿತ ಮಡಿವಾಳ, ಮಹಾದೇವ ಕೊಡನೆ, ಓಂಕಾರ ಗೋಂಧಳಿ, ಓಂಕಾರ ಸಾಳುಂಕೆ, ಮಾರುತಿ ಮಡಿವಾಳ, ಮುನೀರ್ ಮಾಂಜರೇಕರ, ಬಾಳಾಸಾಹೇಬ ಮಡಿವಾಳ ಇತರರಿದ್ದರು.