ಐನಾಪುರದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಡಾ.ಸುನೀಲಕುಮಾರ ನೂಲಿ ಮಾತನಾಡಿದರು. ಜಗದೀಶ ಪಟವರ್ಧನ, ಅಣ್ಣಾಸಾಬ ಡೂಗನವರ, ಸುಭಾಷ ಪಾಟೀಲ ಇತರರಿದ್ದರು.
- ಕೃಷಿ ವಿಜ್ಞಾನಿ ಡಾ.ಸುನೀಲಕುಮಾರ ನೂಲಿ ಹೇಳಿಕೆ
- ಸಿದ್ಧೇಶ್ವರ ಜಾತ್ರೋತ್ಸವ ಅಂಗವಾಗಿ ವಿಚಾರ ಸಂಕಿರಣ
ಐನಾಪುರ: ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸಿ ಭೂಮಿ ಫಲವತ್ತತೆ ಹಾಳು ಮಾಡುತ್ತಿರುವುದು ದುರದುಷ್ಟಕರ ಎಂದು ಕೃಷಿ ವಿಜ್ಞಾನಿ ಡಾ.ಸುನೀಲಕುಮಾರ ನೂಲಿ ಕಳಕಳ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ಪ್ರಾಮಾಣಿಕ ಬೆಂಬಲ ಬೆಲೆ ಸಿಗುತ್ತಿಲ್ಲ. ಕಬ್ಬಿಗೆ ಹೆಚ್ಚಿನ ಇಳುವರಿ ಪಡೆಯಲು ಕೊಟ್ಟಿಗೆ, ಹಸಿರೆಲೆ, ಕೋಳಿ, ಎರೆಹುಳ ಗೊಬ್ಬರ ಹಾಗೂ ಜೀವಾಮೃತ ಉಪಯೋಗಿಸಿ ೪ರಿಂದ ೫ ಅಡಿ ಸಾಲಿಗೆ ಕಬ್ಬು ಲಾವಣಿ ಮಾಡಬೇಕು. ರವದಿ ಸುಡದೆ ಭೂ ಫಲವತ್ತತೆ ಕಾಪಾಡಿಕೊಂಡು ಹೆಚ್ಚಿನ ಇಳುವರಿ ಪಡೆದುಕೊಳ್ಳಬೇಕು ಎಂದರು.
ವಿಜ್ಞಾನಿ ಡಾ.ಎಸ್.ಆರ್.ಸಲಕಿನಕೊಪ್ಪ ಮಾತನಾಡಿ, ಭೂಮಿ ಹದ ಮಾಡಿ ನೀರು ನಿರ್ವಹಣೆಯೊಂದಿಗೆ ಸಂಸ್ಕರಿಸಿದ ಬೀಜ ಬಿತ್ತನೆ ಮಾಡುವುದರಿಂದ ಹೆಚ್ಚು ಇಳುವರಿ ಪಡೆಯಬಹುದು. ಹನಿ ನೀರಾವರಿ ಪದ್ಧತಿ ಅಳವಡಿಸುವುದರಿಂದ ಫಲವತ್ತತೆ ಇನ್ನೂ ಹೆಚ್ಚುತ್ತದೆ ಎಂದರು.
ಕುದುರೆ ಹಾಗೂ ಎತ್ತಿನ ಗಾಡಿ ಶರ್ಯತ್ತಿನಲ್ಲಿ ನರವಾಡದ ಸಚಿನ ಕಟ್ಟಿಕರ ಪ್ರಥಮ, ಅರಗ ಗ್ರಾಮದ ಅರುಣ ನಾಯಿಕ ದ್ವಿತೀಯ, ಐನಾಪುರ ಅಮಸಿದ್ದ ಅಡಿಸೇರಿ ತೃತೀಯ ಹಾಗೂ ಗೋಕುಲ ಅಪರಾಜ ಚತುರ್ಥ ಬಹುಮಾನ ಪಡೆದರು. ಟಗರು ಕಾದಾಟದಲ್ಲಿ ಬ್ಯಾಕೋಡ ಗ್ರಾಮದ ಲಕ್ಷ್ಮಿದೇವಿ ಬ್ಯಾಕೋಡ ತಂಡದ ತಮ್ಮಣ್ಣ ಸನದಿ ಪ್ರಥಮ, ಅಜ್ಜಪ್ಪ ನಿಲಜಗಿ ದ್ವಿತೀಯ, ಸಿದ್ದಪ್ಪ ಬೈಲ್ ತೃತೀಯ, ಗಿರಮಲ್ಲ ಘಟನಟ್ಟಿ ಚತುರ್ಥ ಸ್ಥಾನ ಪಡೆದರು.
ಗುರುದೇವಾಶ್ರಮದ ಬಸವೇಶ್ವರ ಶ್ರೀ, ಅಭಿನವ ನಾಗಲಿಂಗ ಸ್ವಾಮೀಜಿ, ಸುಭಾಷ ಪಾಟೀಲ, ಉಗಾರ ಸಕ್ಕರೆ ಕಾರ್ಖಾನೆ ಅಽಕಾರಿಗಳಾದ ಜಗದೀಶ ಪಟವರ್ಧನ, ದಾದಾ ಜಂತೆನ್ನವರ, ಪ್ರವೀಣ ಗಾಣಿಗೇರ, ಸಂಜು ಭಿರಡಿ, ಸಂಜು ಕುಚನೂರೆ, ಚಮಣರಾವ ಪಾಟೀಲ, ಕುಮಾರ ಅಪರಾಜ, ಉಮೇಶ ಕಾರ್ಚಿ, ಸದಾಶಿವ ಗಾಣಿಗೇರ ಇತರರಿದ್ದರು. ಅರುಣ ಗಾಣಿಗೇರ, ಅಣ್ಣಾಸಾಬ ಡೂಗನವರ, ಸುದರ್ಶನ ಜಂತೆನ್ನವರ, ರಾಕೇಶ ಬಣಜವಾಡ, ಬಾಳು ಮಡಿವಾಳರ, ತಾತ್ಯಾಸಾಬ ಕೋರ್ಬು, ಸಂಜು ಕುಸನಾಳೆ, ಅಶೋಕ ಅಪರಾಜ, ಗುಂಡು ಖವಟಕೊಪ್ಪ, ಪ್ರಭು ಅಪರಾಜ, ಸುಭಾಷ ಜೋಶಿ, ಭರತೇಶ ತೇರದಾಳೆ ಇತರರಿದ್ದರು.