ಪರಮಾನಂದವಾಡಿ ಸಮೀಪದ ಬಿ.ಆರ್.ದರೂರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಬಿ.ಎಸ್.ಸನದಿ, ಆರ್.ಎಸ್.ಯಶೆಟ್ಟಿ, ಡಾ.ವಿ.ಎಸ್.ಮಾಳಿ, ಆರ್.ಎ.ಬಾವಿ, ಅಭಿಷೇಕ ದರೂರ, ಪಿ.ಎಲ್.ಕಾಂಬಳೆ ಇತರರಿದ್ದರು. 
ಬೆಳಗಾವಿ

ಕ್ರೀಡೆಯಲ್ಲಿ ಭಾಗವಹಿಸಲು ಆದ್ಯತೆ ಸಿಗಲಿ

ಪರಮಾನಂದವಾಡಿ: ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬರು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಮುಖಂಡ ಬಿ.ಎಸ್.ಸನದಿ ಹೇಳಿದರು.
ಸಮೀಪದ ಸುಟ್ಟಟ್ಟಿ ಕ್ರಾಸ್‌ನಲ್ಲಿರುವ ಎಸ್‌ವಿಇ ಸಂಸ್ಥೆಯ ಬಿ.ಆರ್.ದರೂರ ಆಂಗ್ಲ ಮಾಧ್ಯಮ ಗ್ರಾಮೀಣ
ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಗಳಲ್ಲಿ ಪರಿಶ್ರಮ, ತಾಳ್ಮೆ ಪ್ರಮುಖವಾಗಿದೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು. ಸಂಸ್ಥೆ ಸದಸ್ಯ ಆರ್.ಎಸ್.ಯಶೆಟ್ಟಿ, ಡಾ.ವಿ.ಎಸ್.ಮಾಳಿ, ಆರ್.ಎ.ಭಾವಿ, ಅಭಿಷೇಕ ದರೂರ, ಪಿ.ಎಲ್.ಕಾಂಬಳೆ, ಎಸ್.ಕೆ.ಸರತ, ದೈಹಿಕ ಶಿಕ್ಷಣ ಶಿಕ್ಷಕ ಬೀರಪ್ಪ ದುಂಡಗೆ, ಅಕ್ಷತಾ ಕುರಣೆ ಹಾಗೂ ವಿದ್ಯಾರ್ಥಿಗಳು ಇದ್ದರು.