ಹುಕ್ಕೇರಿ ಪಟ್ಟಣ ಹೊರವಲಯದಲ್ಲಿ ಶೆಟ್ಟಿಹಳ್ಳಿ-ಇಚಲಕರಂಜಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಸತ್ಯಪ್ಪ ನಾಯಿಕ, ರವಿ ಕರಾಳೆ, ಗುರು ಕುಲಕರ್ಣಿ ಇತರರಿದ್ದರು.
ಹುಕ್ಕೇರಿ: ಕ್ಷೇತ್ರದ ಜನರ ಸುರಕ್ಷಿತ ಪ್ರಯಾಣಕ್ಕಾಗಿ ಗುಣಮಟ್ಟದ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿ-ಇಂಚಲಕರಂಜಿ ರಸ್ತೆ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣ ಹೊರವಲಯದ ಉಮೇಶ ನಗರ ಬಳಿ 8.50 ಕೋಟಿ ರೂ. ವೆಚ್ಚದಲ್ಲಿ ಶೆಟ್ಟಿಹಳ್ಳಿ-ಇಂಚಲಕರಂಜಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಪೂಜೆ ನೆರವೇರಿಸಿ ಮಾತನಾಡಿದರು. 3 ಕೋಟಿ ರೂ. ವೆಚ್ಚದಲ್ಲಿ ಗೌಡವಾಡ ಕ್ರಾಸ್‌ನಿಂದ ಬಸ್ತವಾಡ, ಬೆಣಿವಾಡ, ಸುಲ್ತಾನಪುರ, ನೊಗನಿಹಾಳ, ಅವರಗೋಳ ಗ್ರಾಮದ ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಸಾರ್ವಜನಿಕರು ಕಾಮಗಾರಿಗೆ ಸಹಕರಿಸುವಂತೆ ಮನವಿ ಮಾಡಿದರು.
ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಸತ್ಯೆಪ್ಪ ನಾಯಿಕ, ಮುಖಂಡರಾದ ರವಿ ಕರಾಳೆ, ಗುರು ಕುಲಕರ್ಣಿ, ಸಂಜಯ ನಿಲಜಗಿ, ರಾಜು ಮುನ್ನೋಳಿ, ಬಾಹುಬಲಿ ನಾಗನೂರೆ, ಚಂದ್ರಶೇಖರ ಗಂಗನ್ನವರ, ಜಿನಗೌಡ ಇಮಗೌಡನವರ, ಕಿರಣ ರಜಪೂತ, ಬಸವೇಶ ಪಟ್ಟಣಶೆಟ್ಟಿ, ಮಿರ್ಜಾ ಮೋಮಿನ್, ಶಹಜಾನ್ ಬಡಗಾಂವಿ, ಕಬೀರ್ ಮಲ್ಲಿಕ್, ಸುಭಾಸ ನಾಯಿಕ, ಶಿವನಾಯಿಕ ನಾಯಿಕ, ಮಲ್ಲಪ್ಪ ಬಿಸಿರೊಟ್ಟಿ, ಶ್ರೀಕಾಂತ ಬಿಸಿರೊಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಸಹಾಯಕ ಅಭಿಯಂತರ ಪ್ರಭಾಕರ ಕಾಮತ ಇತರರಿದ್ದರು