ಸವದತ್ತಿಯ ಗುರ್ಲಹೊಸೂರ ಉರ್ದು ಶಾಲೆಯಲ್ಲಿ ಶಾಲಾ ಕೊಠಡಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಅಕ್ಬರ್‌ಅಲಿ ಖಾಜಿ, ಚಂದ್ರಣ್ಣ ಶ್ಯಾಮರಾಯನವರ, ಲತೀಫ್ ಸವದತ್ತಿ, ಎ.ಎ್.ಕಂಪ್ಲಿ ಇತರರಿದ್ದರು. 
ಬೆಳಗಾವಿ

ಸರ್ಕಾರಿ ಶಾಲೆ ಅಭಿವೃದ್ಧಿಗೆ ಆದ್ಯತೆ

ಶಂಕರ ಗೆಜ್ಜಿ
ಸವದತ್ತಿ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ತಾಲೂಕಿನ ಗುರ್ಲಹೊಸೂರ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 36 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಉದ್ದೇಶವಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಬಿಇಒ ಅಕ್ಬರ್‌ಅಲಿ ಖಾಜಿ, ಎಸ್‌ಡಿಎಂಸಿ ಅಧ್ಯಕ್ಷ ಹಜರತ್‌ಸಾಬ್ ಹಲೀಮ್‌ನವರ, ಮುಖ್ಯಶಿಕ್ಷಕ ಎ.ಎ್.ಕಂಪ್ಲಿ, ಚಂದ್ರಣ್ಣ ಶ್ಯಾಮರಾಯನವರ, ಬಸವರಾಜ ಅರಮನಿ, ಲತೀಫ್ ಸವದತ್ತಿ, ದಾದಾಬಾಯಿ ಚೂರಿಖಾನ್, ಎಚ್.ಎಲ್.ನದಾಫ್, ಸಾದಿಕ್ ಶಿರಸಂಗಿ, ಮೌಲಾನಾ ಅತ್ತಾರ್ ಇತರರಿದ್ದರು.