ನಿಡಸೋಸಿ ಎಸ್‌ಜೆಪಿಎನ್ ಟ್ರಸ್ಟ್ನ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಶಿವಪ್ರಸಾದ ದೇವರು ಮಾತನಾಡಿದರು. ವಿನಾಯಕ ಹಿರೇಮಠ, ಎಂ.ಬಿ.ಕೋಥಳಿ, ಬಸವರಾಜ ಹಾಲಭಾವಿ ಇತರರಿದ್ದರು.
- ಶಿವಪ್ರಸಾದ ದೇವರು ಅಭಿನುಡಿ
- ವಿವಿಧ ಘಟಕಗಳ ಉದ್ಘಾಟನೆ
ತಂದೆ-ತಾಯಿ ತ್ಯಾಗ, ಪರಿಶ್ರಮ, ಸಂಕಷ್ಟಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಉನ್ನತ ಸಾಧನೆ ಮಾಡುವ ಮೂಲಕ ಅವರ ಕನಸು ನನಸಾಗಿಸಬೇಕು ಎಂದು ಚಿಂಚಣಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ಶಿಸ್ತು ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಭರತೇಶ ಬಿಸಿಎ ಕಾಲೇಜು ಪ್ರಾಚಾರ್ಯ ಡಾ.ಎಂ.ಮಹೇಶ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳನ್ನು ಬಳಸಿಕೊಳ್ಳಬೇಕು. ಜ್ಞಾನಾರ್ಜನೆ ಜತೆಗೆ ಕೌಶಲಗಳಿಗೆ ಆದ್ಯತೆ ನೀಡಿದಾಗ ಸವಾಲು ಎದುರಿಸಲು ಸಾಧ್ಯ ಎಂದರು.
ಪೊಲೀಸ್ ಪೇದೆ ವಿನಾಯಕ ಹಿರೇಮಠ ಮಾತನಾಡಿ, ಸತತ ಪ್ರಯತ್ನ, ಪರಿಶ್ರಮ ಮತ್ತು ತಂದೆ-ತಾಯಿ ಪ್ರೇರಣೆ ಇದ್ದರೆ ಅಸಾಧ್ಯವೆನಿಸಿದ್ದನ್ನು ಸಾಧಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಶೈಕ್ಷಣಿಕ ಸಲಹೆಗಾರ ಎಂ.ಬಿ.ಕೋಥಳೆ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.
ಪ್ರಾಚಾರ್ಯ ಬಿ.ಎಂ.ಹಾಲಭಾವಿ ಮಾತನಾಡಿದರು. ಪದವಿ ಅಂತಿಮ ವರ್ಷದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಹಾಗೂ ವಿವಿಧ ವಿಷಯಗಳಲ್ಲಿ ಶೇ.೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಪ್ರೇರಣಾ ದಿವಾಕರ ಸ್ವಾಗತಿಸಿದರು. ಸಂಧ್ಯಾ ಹುಣಶ್ಯಾಳಿ ಪರಿಚಯಿಸಿದರು. ಲಕ್ಷ್ಮಿ ಕಳದಾಳೆ, ವೈಷ್ಣವಿ ಸನದಿ, ರಕ್ಷಿತಾ ಜರಳಿ ನಿರೂಪಿಸಿದರು. ಮಧುರಾ ಧಬಾಲೆ ವಂದಿಸಿದರು.