ಬಡಕುಂದ್ರಿ ಗ್ರಾಮದ ಹೊಳೆಮ್ಮ ದೇವಸ್ಥಾನ ಹತ್ತಿರ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಸತ್ಯಪ್ಪ ನಾಯಿಕ, ಎಚ್.ಎಲ್. ಪೂಜೇರಿ, ಶ್ರೀಶೈಲ ವಾಸೇದಾರ, ಮಲ್ಲು ಗುಡಸಿ, ಮಹಾದೇವ ಪಟಗುಂದಿ ಇತರರಿದ್ದರು. 
ಬೆಳಗಾವಿ

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ

ಹುಕ್ಕೇರಿ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ. ಅಂತಹ ಕಡೆ ಕಟ್ಟಡ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ರಕ್ಷಿ ಗ್ರಾಮದಲ್ಲಿ ಸೋಮವಾರ 17 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗೆ ಅನುದಾನ ನೀಡಲಾಗುವುದು ಎಂದರು.
ಹುಕ್ಕೇರಿ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಜನರ ಕುಂದುಕೊರತೆ ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹರಿಸಲು ಆದೇಶಿಸಿದರು. ಬಡಕುಂದ್ರಿಯ ಹೊಳೆಮ್ಮದೇವಿ ದೇವಸ್ಥಾನದ ಹತ್ತಿರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ನಂತರ ಹುಕ್ಕೇರಿಯ ಗಜಬರವಾಡಿ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಧಿಕಾರಿಗಳಾದ ಸುಭಾಸ ಭಜಂತ್ರಿ, ಶಶಿಧರ ಭೂಸಗೋಳ, ಮಹಾದೇವ ಪಟಗುಂದಿ, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಸತ್ಯಪ್ಪ ನಾಯಿಕ, ಮುಖಂಡರಾದ ಗುರುರಾಜ ಕುಲಕರ್ಣಿ, ಅಶೋಕ ಹಿರೇಕೊಡಿ, ಭೀಮಗೌಡ ಗಿರಿಗೌಡನವರ, ರಾಜು ಮುಜಾವರ್, ಎಚ್.ಎಲ್. ಪೂಜೇರಿ, ಸಿದ್ದು ಮಾನಗಾಂವಿ, ಲಕ್ಕಪ್ಪ ಪೂಜೇರಿ, ಬಾಬುಗೌಡ ಪಾಟೀಲ, ಮಹೇಶ ಬಡಗಾಂವಿ ಇತರರಿದ್ದರು.