ಅಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಉಚಿತ ಶಿಬಿರವನ್ನು ಡಾ.ಅಭಿದಲಿ ಉದ್ಘಾಟಿಸಿದರು. ಜಗದೀಶ ಕೆ.ಎಚ್., ಡಾ.ಮಲ್ಲಿಕಾರ್ಜುನ ಹಿರೇಮಠ, ಬಸವಂತ ಗುಡ್ಡಾಪುರ, ಮಂಜುಳಾ ಪತ್ತಾರ ಇತರರಿದ್ದರು. 
ಬೆಳಗಾವಿ

ಕಣ್ಣಿನ ಸಂರಕ್ಷಣೆಗೆ ಆದ್ಯತೆ ನೀಡಲಿ

ಪ್ರಶಾಂತ ಹೂಗಾರ
ಅಥಣಿ ಗ್ರಾಮೀಣ: ಆರೋಗ್ಯಯುತ ಜೀವನಕ್ಕೆ ಸಾತ್ವಿಕ ಆಹಾರ ಅಗತ್ಯವಾಗಿದ್ದು, ಭೂಮಿಯನ್ನು ಕಲುಷಿತ ಮಾಡದೇ ಸಾವಯವ ಪದಾರ್ಥ ಬಳಸಿ ರೋಗಮುಕ್ತ ಬದುಕು ರೂಪಿಸಿಕೊಳ್ಳಬೇಕು ಎಂದು ಡಾ.ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಾಯಿದೀಪ ಆಸ್ಪತ್ರೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ದೇಹದ ಪ್ರಮುಖ ಅಂಗವಾಗಿರುವ ಕಣ್ಣಿನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ತಜ್ಞ ವೈದ್ಯರ ಸಲಹೆಯಂತೆ ಕಣ್ಣಿನ ಕಾಳಜಿ ಮತ್ತು ಸಂರಕ್ಷಣೆ ಅವಶ್ಯ ಎಂದರು.
ತಾಲೂಕು ಯೋಜನಾಧಿಕಾರಿ ಜಗದೀಶ ಕೆ.ಎಚ್. ಮಾತನಾಡಿ, ಮಹಿಳಾ ಸಬಲೀಕರಣ ದೃಷ್ಟಿಯಿಂದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆಗೆ ವಿರೇಂದ್ರ ಹೆಗಡೆ ಶ್ರಮಿಸುತ್ತಿದ್ದಾರೆ. ಬಡ ಹಾಗೂ ಮದ್ಯಮವರ್ಗದ ಜನರಿಗೆ ದಾರಿದೀಪವಾಗಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪುರ, ಸಾಯಿದೀಪ ಆಸ್ಪತ್ರೆಯ ಡಾ.ಅಭಿದಲಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಪೂಜಾರಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ ಪತ್ತಾರ, ಜಿಲ್ಲಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ ಬೋಗೂರ, ಮೇಲ್ವಿಚಾರಕ ಮಹಾಂತೇಶ ಎಂ., ಲಲಿತಾ ಖೊಬ್ರಿ ಇತರರಿದ್ದರು. ಸುವರ್ಣಾ ಧೂಳಶೆಟ್ಟಿ ಸ್ವಾಗತಿಸಿದರು. ಸ್ವಾತಿ ಪತ್ತಾರ ನಿರೂಪಿಸಿದರು.