ಬೆಳಗಾವಿಯಲ್ಲಿ ಬುಧವಾರ ಜರುಗಿದ ಪತ್ರಿಕಾ ವಿತರಕರ ಸಂಘದ ಸಭೆಯಲ್ಲಿ ಶಂಭುಲಿಂಗ ಚಿತ್ರದುರ್ಗ, ಬಿಜಿಕೆರೆ ಮಲ್ಲಿಕಾರ್ಜುನ, ದೀಪಕ ರಾಜಗೋಳಕರ, ಪ್ರತಾಪ ಬೋಸ್ಲೆ, ರಾಜು ಬೋಸ್ಲೆ, ಸಂಜಯ ಗೋಡ್ಪಡೆ, ಸತೀಶ ನಾಯಕ, ರಾಜಶೇಖರ ಜಮಖಂಡಿ, ರಾಜು ಜಾಧವ ಇತರರು ಪಾಲ್ಗೊಂಡಿದ್ದರು. 
ಬೆಳಗಾವಿ

ಪತ್ರಿಕಾ ವಿತರಕರ ಸಮ್ಮೇಳನ ಪೂರ್ವಭಾವಿ ಸಭೆ

ಡಿ.ವಿ. ಕಮ್ಮಾರ
ಬೆಳಗಾವಿ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕಾ ವಿತರಕರ ಸಂಘದಿಂದ ಪತ್ರಿಕಾ ವಿತರಕರ ಆರನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬುಧವಾರ ಜರುಗಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ವಿತರಕರ ಸ್ವಾಗತಕ್ಕೆ ಮಾಡಿಕೊಂಡಿರುವ ಸಿದ್ಧತೆ, ಮಾಡಿಕೊಂಡಿರುವ ಸೌಕರ್ಯಗಳು, ಸಿಗಲಿರುವ ಸೌಲಭ್ಯಗಳು ಹಾಗೂ ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಪತ್ರಿಕಾ ವಿತರಕರು ವಹಿಸಲಿರುವ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಶಂಭುಲಿಂಗ ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನ ಅಧ್ಯಕ್ಷ ಬಿಜಿಕೆರೆ ಮಲ್ಲಿಕಾರ್ಜುನ, ಬೆಳಗಾವಿ ಜಿಲ್ಲಾ ಅಧ್ಯಕ್ಷ ದೀಪಕ ರಾಜಗೋಳಕರ, ಗೌರವಾಧ್ಯಕ್ಷ ಪ್ರತಾಪ ಬೋಸ್ಲೆ, ರಾಜು ಬೋಸ್ಲೆ, ಸಂಜಯ ಘೋರ್ಪಡೆ, ಸತೀಶ ನಾಯಕ, ರಾಜಶೇಖರ ಜಮಖಂಡಿ, ರಾಜು ಜಾಧವ, ರಾಜು ಮುಚ್ಚಂಡಿ, ಸಂಜಯ ಕದಂ, ಸಾಗರ ಅಜೋಳ್ಕರ, ಶ್ರೀಕಾಂತ ನಿಯೋಗಿ, ಪ್ರಶಾಂತ ಶಾಪುಲ್ಕರ, ಬಾವು ಪವಾರ, ಬೈಲಹೊಂಗದ ಯಾಸಿನ ಕಿತ್ತೂರ, ಧಾರವಾಡ ಜಿಲ್ಲಾಧ್ಯಕ್ಷ ಶಿವು ಹಲಗಿ, ನಾಗರಾಜ ಕುಲಕರ್ಣಿ, ಶಿವರಾಮ ಶರಗುಪ್ಪಿ ಇತರರಿದ್ದರು.
ವಿವಿಧ ಸಂಸ್ಥೆಯ ಪ್ರತಿನಿಧಿಗಳಾದ ರಘುವೀರ ಕುಲಕರ್ಣಿ, ಸಂದೀಪ ವರುಣೆ, ರೋಹಿತ, ದಿಲೀಪ, ಚಂದನ ಶೇಖರ, ವಿಶಾಲ ದೇಶಪಾಂಡೆ ಪಾಲ್ಗೊಂಡಿದ್ದರು.