ಬೆಳಗಾವಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಸಭೆಯಲ್ಲಿ ಕೆ.ಶಂಭುಲಿಂಗ, ದೀಪಕ ರಾಜಗೋಳ್ಕರ, ಶ್ರೀಕಾಂತ ನೇವಗಿ, ರಾಜು ಭೋಸಲೆ, ಶಿವಾಜಿ ಮೇತ್ರಿ, ರಾಜು ಮುಚ್ಚಂಡಿ ಇತರರಿದ್ದರು.
ಬೆಳಗಾವಿ: ಪತ್ರಿಕಾ ವಿತರಕರ ರಾಜ್ಯಮಟ್ಟದ 6ನೇ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪತ್ರಿಕಾ ವಿತರಕರ ಅಧ್ಯಕ್ಷ ಕೆ.ಶಂಭುಲಿಂಗ ಹೇಳಿದರು.
ಶಿವಾಜಿ ನಗರದ ರುಕ್ಮೀಣಿ ನಿವಾಸ ಕಟ್ಟಡದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ವಿತರಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಒಕ್ಕೂಟ ಪತ್ರಿಕಾ ವಿತರಕರ ಸಂಕಷ್ಟ, ಭಾವನೆಗಳನ್ನು ಈಡೇರಿಸುವ ಸಲುವಾಗಿ ಸಮ್ಮೇಳ ಆಯೋಜಿಸುತ್ತ ಬಂದಿದೆ.
ಪತ್ರಿಕಾ ವಿತರಕರ ಹಲವು ಬೇಡಿಕೆಗಳು ಸರ್ಕಾರದ ಮುಂದಿವೆ. ಅವೆಲ್ಲವೂ ಈಡೇರಬೇಕು. ಕರೋನಾ ಸಮಯದಲ್ಲಿ 300ಕ್ಕೂ ಹೆಚ್ಚು ವಿತರಕರು ನಿಧನರಾಗಿದ್ದು, ಅವರ ಕುಟುಂಬಗಳಿಗೆ ಸರ್ಕಾರದ ನೆರವು ಕೊಡಿಸುವುದು ಸಂಘಟನೆ ಜವಾಬ್ದಾರಿವಾಗಿದೆ.
ಈ ಬೇಡಿಕೆಗಳ ಈಡೇರಿಕೆಗೆ ಕಾರ್ಯನಿರತ ಪತ್ರಕರ್ತರ ಸಂಘವು ಕೈ ಜೋಡಿಸಿದೆ ಎಂದರು.
ಜಿಲ್ಲಾಧ್ಯಕ್ಷ ದೀಪಕ ರಾಜಗೋಳ್ಕರ ಮಾತನಾಡಿ, ಸಮ್ಮೇಳನದ ಪೂರ್ವಭಾವಿಯಾಗಿ 15 ಕಡೆಗಳಲ್ಲಿ ಸಭೆಯನ್ನು ಮಾಡುತ್ತೇವೆ. ವಿಶೇಷ, ವಿನೂತನವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕೇಳಿಕೊಂಡರು.
ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ನೇವಗಿ, ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರಾಜು ಭೋಸಲೆ, ಶಿವಾಜಿ ಮೇತ್ರಿ, ರಾಜು ಮುಚ್ಚಂಡಿ, ಭೀಮಾಶಂಕರ ಕೋಟೂರ, ಯಾಸಿನ್ ಕಿತ್ತೂರ, ಶಿವಾಜಿ ಸಿಂಧು, ರಮೇಶ ಹಿರೇಮಠ, ಸಂಜೀವ ಪಟ್ಟಣಶೆಟ್ಟಿ, ಪ್ರಶಾಂತ ಶಹಾಪುರಕರ, ರಾಜು ಜಾಧವ, ಮಹಾದೇವ ನಡುವಿನಕೇರಿ, ನಾಗರಾಜ ಹಿರೇಮಠ, ಶಿವಾನಂದ ಹಲಗಿ, ಸತೀಶ ನಾಯಿಕ, ವಿಶ್ವನಾಥ ಮಾಯನಟ್ಟಿ, ಸತೀಶ ಗುಂಡೂಚ್ಚೆ, ಹನೀಫ್ ಜಾರೆ, ಸುಧೀರ ಕುಲಕರ್ಣಿ, ಪ್ರಫುಲ ಕುಂಡ್ಲೆ ಇತರರಿದ್ದರು.