ಗೋಕಾಕ ನಗರದಲ್ಲಿ ವಿವಿಧ ವಸ್ತುಪ್ರದರ್ಶನವನ್ನು ಸುವರ್ಣಾ ಜಾರಕಿಹೊಳಿ ಉದ್ಘಾಟಿಸಿದರು. ಸನತ್ ಜಾರಕಿಹೊಳಿ, ಡಾ.ಎ.ಬಿ.ಪಾಟೀಲ, ಇತರರಿದ್ದರು. 
ಬೆಳಗಾವಿ

ವಿಜ್ಞಾನಿಗಳಾಗಲು ಸಿದ್ಧತೆ ನಡೆಸಿ

ರಾಘವೇಂದ್ರಗೌಡ ಭೀ ಪಾಟೀಲ್
ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ.
ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮಲ್ಲಿರುವ ಪ್ರತಿಭೆ ಗುರುತಿಸಿ, ಸಂಶೋಧನಾ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ಪ್ರತಿಭಾನ್ವಿತರಾಗಲು ಸಲಹೆ ನೀಡಿದರು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥ ಡಾ.ಎ.ಬಿ.ಪಾಟೀಲ, ಡಾ.ಐ.ಎಸ್.ಪವಾರ, ಡಾ.ಜಿ.ಆರ್.ನಿಡೋಣಿ, ಅರುಣ ಪೂಜೇರ, ಎಚ್.ಎಸ್.ಅಡಿಬಟ್ಟಿ, ಪಿ.ಡಿ.ಖಂಡ್ರಟ್ಟಿ, ಎ.ಎಂ.ಸರಕಾವಸ, ಎಚ್.ವಿ.ಪಾಗ್ನೀಸ, ಪಿ.ವಿ.ಚಚಡಿ ಇತರರಿದ್ದರು.