ಕಾಗವಾಡ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿಇಒ ಪಿ.ಬಿ.ಮದಭಾವಿ ಮಾತನಾಡಿದರು. ರವೀಂದ್ರ ಹಾದಿಮನಿ, ವೀರಣ್ಣ ವಾಲಿ, ರಾಘವೇಂದ್ರ ಖೋತ, ಡಾ.ಪುಷ್ಪಲತಾ ಸುಣ್ಣದಕಲ್ಲ ಇತರರಿದ್ದರು. 
ಬೆಳಗಾವಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣ

ಪ್ರಶಾಂತ ಹೂಗಾರ
ಕಾಗವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.18ರಿಂದ ಏ.2ರವರೆಗೆ ನಡೆಯಲಿದ್ದು, ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ ತಿಳಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಈಚೆಗೆ ಮಾತನಾಡಿ, ತಾಲೂಕಿನಲ್ಲಿ 1,269 ವಿದ್ಯಾರ್ಥಿಗಳು, 1,242 ವಿದ್ಯಾರ್ಥಿನಿಯರು ಸೇರಿ ಒಟ್ಟು 2,511 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಾಗವಾಡ, ಶಿರಗುಪ್ಪಿ, ಶೇಡಬಾಳ, ಉಗಾರ ಖುರ್ದ, ಐನಾಪುರ, ಮೋಳೆ ಸೇರಿ 6 ಪರೀಕ್ಷಾ ಕೇಂದ್ರಗಳಿದ್ದು, ಸುಮಾರು 105 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು 6 ಮುಖ್ಯ ಅಧೀಕ್ಷಕರು, 6 ಉಪ ಅಧೀಕ್ಷಕರು, 5 ಕಸ್ಟೋಡಿಯನ್, 6 ಮೊಬೈಲ್ ಸ್ವಾಧೀನಾಧಿಕಾರಿಗಳು, 6 ಸ್ಥಾನಿಕ ಜಾಗೃತ ದಳದವರು, 3 ಫ್ಲಾಯಿಂಗ್ ಸ್ಕಾ ್ವಡ್ ಸೇರಿ ಒಟ್ಟು 41 ಸಿಬ್ಬಂದಿ ನೇಮಿಸಲಾಗಿದೆ. ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಜತೆಗೆ ವೆಬ್ ಕ್ಯಾಮರಾ ಅಳವಡಿಸಲಾಗಿದೆ ಎಂದರು.
ತಹಸೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನಲ್ಲಿ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಒಬ್ಬರು ಸಿಎಚ್‌ಒ ಹಾಗೂ ಇಬ್ಬರೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗುತ್ತಿದೆ. ತುರ್ತುಸೇವೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಪಿಎಸ್‌ಐ ರಾಘವೇಂದ್ರ ಖೋತ, ಸಿಡಿಪಿಒ ರವಿಂದ್ರ ಗುದಗೆನ್ನವರ, ವೈದ್ಯಾಧಿಕಾರಿ ಡಾ.ಪುಷ್ಪಲತಾ ಸುಣ್ಣದಕಲ್ಲ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವೈ.ಪೂಜೇರಿ, ಶಿಕ್ಷಣ ಸಂಯೋಜಕ ಭರತ ಭಿಲವಡೆ, ಬಿಆರ್‌ಪಿಗಳಾದ ಬಿ.ಬಿ.ಟೊನಗೆ, ರವೀಂದ್ರ ನಾಂದಣಿ, ನೂಡಲ್ ಅಧಿಕಾರಿ ಎಸ್.ಆರ್.ಮಾಳಿ ಇತರರಿದ್ದರು.