ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆಯಲ್ಲಿ ಗರ್ಭ ಸಂಸ್ಕಾರ ಕಾರ್ಯಕ್ರಮವನ್ನು ಡಾ.ಅರವಿಂದ ಮಿಣಚೆ ಉದ್ಘಾಟಿಸಿದರು. ಡಾ.ಕಿರಣ ಮುತ್ನಾಳಿ, ಡಾ.ಅನಘಾ, ಡಾ.ಬಾಹುಬಲಿ ಮಹಾಜನ ಇದ್ದರು. 
ಬೆಳಗಾವಿ

ಗರ್ಭಿಣಿಯರಲ್ಲಿ ಸಾತ್ವಿಕ ಚಿಂತನೆ ಇರಲಿ

ಚಿಕ್ಕೋಡಿ: ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮಗುವಿನ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ಕೆಎಲ್‌ಇ ಆಸ್ಪತ್ರೆ ಪ್ರಸೂತಿ ವಿಭಾಗದ ವೈದ್ಯ ಡಾ.ಅರವಿಂದ ಮಿಣಚೆ ಹೇಳಿದರು.
ಪಟ್ಟಣದ ಕೆಎಲ್‌ಇ ಆಯುರ್ವೇದ ಆಸ್ಪತ್ರೆಯಲ್ಲಿ ಬುಧವಾರ ಗರ್ಭಿಣಿಯರ ಆರೋಗ್ಯ ಮತ್ತು ಉತ್ತಮ ಸಂತಾನ ಬೆಳವಣಿಗೆಗೆ ಸಹಕಾರಿಯಾಗುವ ಗರ್ಭ ಸಂಸ್ಕಾರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರು ಸಾತ್ವಿಕ ಆಹಾರ ಸೇವನೆ, ಯೋಗಾಭ್ಯಾಸ, ಧ್ಯಾನದತ್ತ ಗಮನಹರಿಸಬೇಕು. ಸಾತ್ವಿಕ ಚಿಂತನೆಗೆ ಆದ್ಯತೆ ನೀಡಬೇಕು ಎಂದರು.
ಪ್ರಾಚಾರ್ಯ ಡಾ.ಕಿರಣ ಮುತ್ನಾಳಿ ಮಾತನಾಡಿ, ಗರ್ಭಾವಸ್ಥೆಯ ಆರೈಕೆ, ಪೌಷ್ಟಿಕ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಜೀವನ ಶೈಲಿಯ ಮಹತ್ವದ ಬಗ್ಗೆ ಗರ್ಭಿಣಿಯರಿಗೆ ಯೋಗಾಸನ, ಸಂಗೀತ ಚಿಕಿತ್ಸೆ, ಮಂತ್ರ ಚಿಕಿತ್ಸೆ ಮತ್ತು ಪ್ರಾಣಾಯಾಮ ಕುರಿತು ತಿಳಿಸಿದರು. ಸೀರೋಗ, ಪ್ರಸೂತಿ ವೈದ್ಯರಾದ ಡಾ.ಅನಘಾ ಮತ್ತು ಡಾ.ಬಾಹುಬಲಿ ಮಹಾಜನ ಇತರರಿದ್ದರು. ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ ನಿರೂಪಿಸಿದರು.