ರಾಮದುರ್ಗ ನಗರದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಗ್ನಿ ವಿಪತ್ತು ಹಾಗೂ ತುರ್ತು ನಿರ್ವಹಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಎಂ.ಎಂ.ಕವಡಿ ಉದ್ಘಾಟಿಸಿದರು. ಜಿ.ಎ.ಪೀರ್‌ಜಾದೆ, ಡಾ.ಪಿ.ಬಿ.ತೆಗ್ಗಿಹಳ್ಳಿ, ಎ.ಡಿ.ಕಾಮತ ಇತರರಿದ್ದರು.
- ಎಂ.ಎಂ.ಕವಡಿ ಅಭಿಪ್ರಾಯ
- ತುರ್ತು ನಿರ್ವಹಣಾ ಪ್ರಾತ್ಯಕ್ಷಿಕೆ
ರಾಮದುರ್ಗ: ಬೇಜವಾಬ್ದಾರಿಯಿಂದ ಮನೆಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ಅಂತಹ ಸಂದರ್ಭದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ತುರ್ತು ಸಂಖ್ಯೆ 101 ಅಥವಾ 112 ಸಹಾಯವಾಣಿಗೆ ಕರೆ ಮಾಡಬೇಕು ಎಂದು ಸ್ಥಳೀಯ ಅಗ್ನಿ ಶಾಮಕ ಠಾಣಾಧಿಕಾರಿ ಎಂ.ಎಂ.ಕವಡಿ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಗ್ನಿ ವಿಪತ್ತು ಹಾಗೂ ತುರ್ತು ನಿರ್ವಹಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಸಣ್ಣ ತಪ್ಪು ಇಡೀ ಮನೆಯನ್ನು ಸುಟ್ಟುಹಾಕುತ್ತದೆ. ಅಂತಹ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು. ಬೇಸಿಗೆ ದಿನಗಳಲ್ಲಿ ಅಗ್ನಿ ಅವಘಡಗಳು ಜಾಸ್ತಿಯಿರುವ ಕಾರಣ ತುರ್ತು ನಿರ್ಗಮನ ಮಾರ್ಗ ಅನುಸರಿಸಬೇಕು ಎಂದರು.
ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ, ಐಕ್ಯೂಎಸಿ ಸಂಯೋಜಕ ಎ.ಡಿ.ಕಾಮತ, ಜಿ.ಎ.ಪೀರಜಾದೆ ಇತರರಿದ್ದರು. ಯೂತ್ ರೆಡ್‌ಕ್ರಾಸ್ ಅಧಿಕಾರಿ ಬಿ.ಬಿ.ಕಬಾಡಗಿ ಸ್ವಾಗತಿಸಿದರು. ಎಸ್.ಎ.ಅಥಣಿ ನಿರೂಪಿಸಿದರು. ಎಸ್.ಐ.ಮಳಗಲಿ ವಂದಿಸಿದರು.