ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹರ ಜಯಂತಿ ಹಾಗೂ ವಧು-ವರರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಮಹಾದೇವಸಿಂಗ್ ರಜಪೂತ, ಮುಕುಂದ ಕುಲಕರ್ಣಿ, ಧರ್ಮಸಿಂಗ್ ಕೋತ್ವಾಲ, ಅನ್ನಪೂರ್ಣಾ ಕನೋಜ, ಬಸವರಾಜ ಬಡಿಗೇರ, ಚಂದ್ರುಸಿಂಗ್ ಅಂಗಡಿ ಇತರರಿದ್ದರು. 
ಬೆಳಗಾವಿ

ಪ್ರತಾಪಸಿಂಹ ಪರಾಕ್ರಮ ಸ್ಮರಣೀಯ

ರಾಘವೇಂದ್ರಗೌಡ ಭೀ ಪಾಟೀಲ್
ಬೈಲಹೊಂಗಲ:
ಚನ್ನಮ್ಮ ವೃತ್ತದಲ್ಲಿರುವ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತಿ ಹಾಗೂ ಹಿಂದೂ ಧರ್ಮದ ವಧು-ವರರ ಸಮಾವೇಶದಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳಿಗಾಗಿ ಹೋರಾಡುವ ಅನಿವಾರ್ಯತೆ ಇದ್ದು, ಸರ್ಕಾರ ರಜಪೂತ ಸಮುದಾಯಕ್ಕೆ ನಿಗಮ-ಮಂಡಳಿ ಸ್ಥಾಪಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ನಿವೃತ್ತ ಪಿಎಸ್‌ಐ ಧರ್ಮಸಿಂಗ್ ಕೋತ್ವಾಲ, ಅನ್ನಪೂರ್ಣಾ ಕನೋಜ, ಕ್ಷತ್ರೀಯ ಸಮುದಾಯದ ಮುಖಂಡ ಬಸವರಾಜ ಬಡಿಗೇರ, ಚಂದ್ರುಸಿಂಗ್ ಅಂಗಡಿ, ಪ್ರತಾಪಸಿಂಗ್ ರಜಪೂತ, ಡಾ.ಚಂದ್ರಕಾಂತಸಿಂಗ್ ಕೋತ್ವಾಲ, ಶಂಕರಸಿಂಗ್ ಹಜೇರಿ, ಆರತಿ ರಜಪೂತ, ರಾಮಸಿಂಗ್ ರಜಪೂತ, ಅಣ್ಣಪ್ಪ ಜೊಂಜಾಳೆ, ಗಂಗಪ್ಪ ಗುಗ್ಗರಿ ಇತರರಿದ್ದರು.
ಲಕ್ಷ್ಮೀಬಾಯಿ ಶಿಲ್ಲೇದಾರ ಹಾಗೂ ಖುಷಿಸಿಂಗ್ ರಜಪೂತ ಪ್ರಾರ್ಥಿಸಿದರು. ಪ್ರತಿಭಾ ಚೌಗಲೆ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.