ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಯುವಕರನ್ನು ಕರೆದೊಯ್ದ ಪೊಲೀಸರು.  
ಬೆಳಗಾವಿ

ಪೊಲೀಸ್ ಮೇಲೆ ಹಲ್ಲೆ, ಯವಕರು ವಶಕ್ಕೆ

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಯುವಕರ ಗುಂಪಿನ ಮಧ್ಯೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಮುಂದಾದ ಪೊಲೀಸ್ ಮೇಲೆ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದ್ದು, ಮಾರ್ಕೆಟ್ ಠಾಣೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ರುಕ್ಮೀಣಿ ನಗರದ ಯುವಕರು ಹಳೇ ಪ್ರಕರಣದ ಸಾಕ್ಷಿಗಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಎರಡೂ ಕಡೆಯವರ ನಡುವಿನ ಗಲಾಟೆ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಇವರ ಜಗಳ ಬಿಡಿಸಲು ಬಂದಿದ್ದ ಮಾರ್ಕೆಟ್ ಠಾಣೆಯ ಮಲ್ಲಿಕಾರ್ಜುನ ಗುಂಜೀಕರ ಮೇಲೆ ಹಲ್ಲೆ ಮಾಡಿದ್ದಾರೆ.