ಯಲ್ಲಮ್ಮನ ಗುಡ್ಡದಲ್ಲಿ ಪ್ಲಾಸ್ಟಿಕ್‌ಮುಕ್ತ ಯಲ್ಲಮ್ಮ ದೇವಸ್ಥಾನ ಅಭಿಯಾನ ನಡೆಸಲಾಯಿತು. ಪ್ರಭಾವತಿ ಕೀರಪುರ, ಅಲ್ಲಮಪ್ರಭು ಪ್ರಭುನವರ, ಶೀತಲ ಕಡಟ್ಟಿ, ಶಿವು ನಂದಗಾಂವಿ ಇತರರಿದ್ದರು.
ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿರುವ ಪ್ರತಿಯೊಬ್ಬ ವ್ಯಾಪಾರಿಗಳು ಪ್ಲಾಸ್ಟಿಕ್‌ಮುಕ್ತ ವ್ಯವಹಾರ ಮಾಡುವುದಾಗಿ ಸಂಕಲ್ಪ ತೋಡಬೇಕು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಕೀರಪುರ ಹೇಳಿದರು.
ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ಮುಕ್ತ ಯಲ್ಲಮ್ಮ ದೇವಸ್ಥಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ಮುಕ್ತ ವಾತಾವರಣ ನಿರ್ಮಾಣವಾದರೆ ಮಾತ್ರ ಪರಿಸರ ಉಳಿಯಲು ಸಾಧ್ಯ. ಈ ಅಭಿಯಾನಕ್ಕೆ ದೇವಸ್ಥಾನದ ಎಲ್ಲ ವ್ಯಾಪಾರಿಗಳು ಕೈಜೋಡಿಸಬೇಕು. ಎಲ್ಲರೂ ದೇವಸ್ಥಾನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್‌ಮುಕ್ತ ಯಲ್ಲಮ್ಮನ ಗುಡ್ಡಕ್ಕಾಗಿ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದೇವೆ. ಎಲ್ಲರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಅಲ್ಲಮಪ್ರಭು ಪ್ರಭುನವರ, ಶೀತಲ ಕಡಟ್ಟಿ, ಶಿವು ನಂದಗಾಂವಿ ಇತರರಿದ್ದರು.