ಹೊಸಕೋಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಾಸುದೇವ ಸುತದಾಸ ಪ್ರಭೂಜಿ, ಅಪ್ಪಾಜಿಗೌಡ ಪಾಟೀಲ ಇತರರಿದ್ದರು.
- ವಾಸುದೇವ ಸುತದಾಸ ಪ್ರಭೂಜಿ ಅಭಿಮತ
- ಶನೀಶ್ವರ ಪೂಜೆ
ರಾಮದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಕಮಕೇರಿ ವೃಂದಾರಣ್ಯ ಮಠದ ವಾಸುದೇವ ಸುತದಾಸ ಪ್ರಭೂಜಿ ಹೇಳಿದರು.
ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಶನೀಶ್ವರ ಪೂಜಾ ವ್ಯವಸ್ಥಾಪನಾ ಸಮಿತಿ, ಸಾಲಹಳ್ಳಿಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಶ್ರೀ ಸಾಯಿ ಸೇವಾ ಸಮಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗಮೇಶ್ವರ ಮಠದ ಮಹಾದೇವಮ್ಮ ಮಾತೆ ಸಂಸ್ಥೆ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ, ನಿವೃತ್ತ ಪ್ರಾಚಾರ್ಯ ಎಲ್.ಎಸ್. ಕೊಳಚಿ ಮಾತನಾಡಿದರು.
ಅಪ್ಪಾಜಿಗೌಡ ಪಾಟೀಲ, ಮುಖಂಡ ರಾಜೇಂದ್ರಗೌಡ ನಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಮಾದರ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ನಾಯಕ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ ನಾಡಗೌಡರ, ಅಶೋಕ ಕುಲಗೋಡ, ಗ್ರಾಪಂ ಸದಸ್ಯರಾದ ವಿಜಯಕುಮಾರ ಕೃಷ್ಣಗೌಡ್ರ, ಗಿರೀಶ ನಾಡಗೌಡ್ರ, ಲಕ್ಷ್ಮೀಬಾಯಿ ಮಳ್ಳಿಕೇರಿ, ಸುನಂದಾ ಪಾಟೀಲ, ವಿಜಯಲಕ್ಷ್ಮೀ ನಾಡಗೌಡರ, ಪ್ರತಿಭಾ ಕೃಷ್ಣಗೌಡ್ರ, ಮಾಲತಿ ಒಂಟಗೋಡಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುನಿತಾ ಬಡಿಗೇರ, ಸಿಎ ಶರಣು ಬಸಪ್ಪ ಇತರರಿದ್ದರು.
ಸಚಿನ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಗಿರೀಶ ನಿರೂಪಿಸಿದರು.