ಬೆಳಗಾವಿಯಲ್ಲಿ ಕೆಎಲ್‌ಇ ವೇಣುಧ್ವನಿ ಎಫ್‌ಎಂ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಫೊನ್ ಇನ್ ದಲ್ಲಿ ಡಾ.ವಿಲಾಸ ಪತ್ತಾರ ಮತ್ತು ಡಾ.ಶೃತಿ ಕರ್ವೆಕರ್ ಮಾತನಾಡಿದರು. ಮನಿಷ ಪಿ.ಎಸ್. ಮಂಜುನಾಥ ಪೈ ಇದ್ದಾರೆ.
ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಕೇಂದ್ರ, ಕೆಎಲ್‌ಇ ವಿಶ್ವವಿದ್ಯಾಲಯ ಮತ್ತು ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಸೋಮವಾರ ರಾಷ್ಟ್ರೀಯ ಪೆರಿಯೊಡಾಂಟಿಸ್ಟ್ ದಿನದ ಅಂಗವಾಗಿ ನೇರ ಫೋನ್ ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಪೆರಿಯೊಡಾಂಟಿಸ್ಟ್ ವಿಭಾಗದ ರೀಡರ್ ಡಾ.ವಿಲಾಸ ಪತ್ತಾರ ಮತ್ತು ಡಾ.ಶೃತಿ ಕರ್ವೆಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ದಿನದ ಉದ್ದೇಶ, ಮಹತ್ವ ಮತ್ತು ಈ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮಗಳು ಹಾಗೂ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ದಂತ ಚಿಕಿತ್ಸೆಗಳ ಕುರಿತು ಜಾಗೃತಿ ಮೂಡಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.