ಬೆಳಗಾವಿಯಲ್ಲಿ ಕೆಎಲ್‌ಇ ವೇಣುಧ್ವನಿ ಎಫ್‌ಎಂ ಕೇಂದ್ರ ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫೊನ್-ಇನ್‌ದಲ್ಲಿ ಡಾ.ವಿಲಾಸ ಪತ್ತಾರ ಮತ್ತು ಡಾ.ಶ್ರುತಿ ಕರ್ವೆಕರ್ ಮಾತನಾ ಡಿದರು. ಮನಿಷಾ ಪಿ.ಎಸ್. ಮಂಜುನಾಥ ಪೈ ಇದ್ದಾರೆ.
ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ.ಕೇಂದ್ರ, ಕೆಎಲ್‌ಇ ವಿಶ್ವವಿದ್ಯಾಲಯ ಮತ್ತು ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಸೋಮವಾರ ರಾಷ್ಟ್ರೀಯ ಪೆರಿಯೊಡಾಂಟಿಕ್ಸ್ ದಿನದ ಅಂಗವಾಗಿ ನೇರ ಫೋನ್-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಪೆರಿಯೊಡಾಂಟಿಕ್ಸ್ ವಿಭಾಗದ ರೀಡರ್ ಡಾ.ವಿಲಾಸ ಪತ್ತಾರ ಮತ್ತು ಡಾ.ಶ್ರುತಿ ಕರ್ವೆಕರ್ ಈ ದಿನದ ಉದ್ದೇಶ ಹಾಗೂ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ದಂತ ಚಿಕಿತ್ಸೆಗಳ ಕುರಿತು ಜಾಗೃತಿ ಮೂಡಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.