ಸಂಕೇಶ್ವರ-ಸದಲಗಾ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ ಇತರರಿದ್ದರು.
- ಶಾಸಕ ನಿಖಿಲ ಕತ್ತಿ ಅನಿಸಿಕೆ
- ನಮ್ಮ ಕ್ಲಿನಿಕ್ ಆಸ್ಪತ್ರೆ ಉದ್ಘಾಟನೆ
- ವಿವಿಧ ಕಾಮಗಾರಿಗೆ ಚಾಲನೆ
ಸಂಕೇಶ್ವರ: ಅಭಿವೃದ್ಧಿ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜನರ ಸಹಭಾಗಿತ್ವ ಮುಖ್ಯವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ೩ ಕೋಟಿ ವೆಚ್ಚದಲ್ಲಿ ಸಂಕೇಶ್ವರ-ಸದಲಗಾ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಬೀರೇಶ್ವರ ನಗರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನಮ್ಮ ಕ್ಲಿನಿಕ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಈ ಕಾಮಗಾರಿಯಡಿ ಸಿಸಿ ರಸ್ತೆ ಹಾಗೂ ಮರುಡಾಂಬರೀಕರಣ ಮತ್ತು ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಲಾಗುವುದು. ಹಾಗೆಯೇ ಪಟ್ಟಣದ ನಮ್ಮ ಕ್ಲಿನಿಕ್‌ಗೆ ಎಂಬಿಬಿಎಸ್ ವೈದ್ಯರು ನಿಯೋಜನೆಗೊಂಡಿದ್ದು, ಜನರು ಆರೋಗ್ಯ ಸೇವೆಗಳ ಲಾಭ ಪಡೆಯಬೇಕು ಎಂದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕ್ಷೇತ್ರದೆಲ್ಲೆಡೆ ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದು, ಆಯಾ ಕ್ಷೇತ್ರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಲಾಗುವುದು ಎಂದರು.
ತಾಲೂಕಿನ ಕಮತನೂರು ಬಳಿ ಕಾಲುಸಂಕ ನಿರ್ಮಾಣ (೩೪ ಲಕ್ಷ ರೂ.) ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ, ಪುರಸಭೆ ಅಧ್ಯಕ್ಷೆ ಸೀಮಾ ಹತನೂರಿ, ಸದಸ್ಯರಾದ ಸುನೀಲ ಪರ್ವತರಾವ, ಗಂಗಾರಾಮ ಭೂಸಗೋಳ, ಪ್ರಮೋದ ಹೊಸಮನಿ, ದಿಲೀಪ ಹೊಸಮನಿ, ಚಿದಾನಂದ ಕರದನ್ನವರ, ಮಹೇಶ ಹಟ್ಟಿಹೊಳಿ, ಅವಿನಾಶ ನಲವಡೆ, ಪ್ರಶಾಂತ ಪಾಟೀಲ, ಮುಖಂಡರಾದ ರೋಹನ ನೇಸರಿ, ಕಿರಣಸಿಂಗ ರಜಪೂತ, ಸಂತೋಷ ಮುಡಶಿ, ಗುತ್ತಿಗೆದಾರರಾದ ಮಲ್ಲಪ್ಪ ಬಿಸಿರೊಟ್ಟಿ, ಪ್ರಜ್ವಲ ರ‍್ಯಾಳಿ ಇತರರಿದ್ದರು.