ಭೀವಶಿ ಗ್ರಾಮಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು. ಪ್ರಕಾಶ ಶಿಂಧೆ, ಮಧುಕರ ಪಾಟೀಲ, ಕಿಶೋರ ಹರದಾರೆ, ಸಬಗೊಂಡ ಪಾಟೀಲ, ಪ್ರಕಾಶ ಕಾಂಬಳೆ, ನಿತಿನ ಪಾಟೀಲ ಇತರರಿದ್ದರು. 
ಬೆಳಗಾವಿ

ನದಿ ತೀರದ ಜನರು ಆತಂಕಪಡುವ ಅಗತ್ಯವಿಲ

ನಿಪ್ಪಾಣಿ: ನದಿ ತೀರದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜನರ ಸುರಕ್ಷತೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ನದಿ ತೀರದ ಜನರೊಂದಿಗೆ ನಾವು ಇದ್ದೇವೆ. ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಾರದಗಾ, ಜತ್ರಾಟ ಹಾಗೂ ಸಿದ್ನಾಳ ಸಂಪರ್ಕ ಸೇತುವೆ ಜಲಾವತಗೊಂಡು ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಭೀವಶಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ಮಾತನಾಡಿದರು.
ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಕಾಶ ಶಿಂಧೆ, ಮಧುಕರ ಪಾಟೀಲ, ಕಿಶೋರ ಹರದಾರೆ, ಸಬಗೊಂಡ ಪಾಟೀಲ, ಪ್ರಕಾಶ ಕಾಂಬಳೆ, ನಿತಿನ ಪಾಟೀಲ ಇತರರಿದ್ದರು.