ಸರ್ಕಾರಿ ನೌಕರರ ಪಿಂಚಣಿ ಸೌಲಭ್ಯದಲ್ಲಿ ಕಡಿತ ಮಾಡದಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಎಸ್.ಜಿ.ಸಿದ್ನಾಳ, ಮಹಾಂತೇಶ ಹಿರೇಮಠ, ಎಂ.ಎಸ್.ಮುದಕವಿ, ಸಂಜೀವ ಬಡಿಗೇರ, ಸುಶೀಲಾ ರಜಪೂತ, ಕುಸುಮಾ ಕುರಬಗೊಂಡ ಇತರರಿದ್ದರು. 
ಬೆಳಗಾವಿ

ಪಿಂಚಣಿದಾರರ ಸೌಲಭ್ಯ ಕಡಿತ ಸಲ್ಲ

ಬೆಳಗಾವಿ: ಸರ್ಕಾರಿ ನೌಕರರಿಗೆ ನೀಡುತ್ತಿರುವ ಪಿಂಚಣಿಯಲ್ಲಿ ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ರ‌್ಯಾಲಿಯಲ್ಲಿ ತೆರಳಿದ ನಿವೃತ್ತ ನೌಕರರು ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆರ್ಥಿಕ ಬಿಲ್‌ನಲ್ಲಿ 2025ರ ಏಪ್ರಿಲ್ 1ಕ್ಕಿಂತ ಮುನ್ನ ಸೇವಾನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ನೀಡುವ ಪಿಂಚಣಿ ಮತ್ತು ಕೌಟುಂಬಿಕ ಪಿಂಚಣಿಯಲ್ಲಿನ ಕೆಲವು ಸೌಲಭ್ಯ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಇದರಿಂದ ನೌಕರರು ಮತ್ತು ಅವಲಂಬಿತರು ಸಂಕಷ್ಟಕ್ಕೆ ಸಿಲುಕಲಿದ್ದು, ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಎಸ್.ಜಿ.ಸಿದ್ನಾಳ, ಮಹಾಂತೇಶ ಹಿರೇಮಠ, ಎಂ.ಎಸ್.ಮುದಕವಿ, ಸಂಜೀವ ಬಡಿಗೇರ, ಎಂ.ಕೆ.ಅಗಸರ, ಸುಶೀಲಾ ರಜಪೂತ, ಕುಸುಮಾ ಕುರುಬಗೊಂಡ ಇದ್ದರು.