ಸವದಿ ಗ್ರಾಮದ ಸಂಗನಬಸವ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗುರುಮಹಾಂತ ಸ್ವಾಮೀಜಿ, ಗುರುಸಿದ್ಧೇಶ್ವರ ಸ್ವಾಮೀಜಿ, ಸಂಗನಗೌಡ ಪಾಟೀಲ, ಈರಣ್ಣ ಅಜೂರ ಇತರರಿದ್ದರು.
ನಂದೇಶ್ವರ: ನುಡಿದಂತೆ ನಡೆದ ಬಸವಣ್ಣನವರ ತತ್ತ್ವ ವಿಶ್ವಮಾನ್ಯತೆ ಪಡೆದಿವೆ ಎಂದು ಸವದಿ-ಇಳಕಲ್ಲ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಸವದಿ ಗ್ರಾಮದ ಸಂಗನಬಸವ ಶಿವಯೋಗಿಗಳ 84ನೇ ಪುಣ್ಯಸ್ಮರಣೆ ಹಾಗೂ ಡಾ.ಮಹಾಂತ ಶಿವಯೋಗಿಗಳ 8ನೇ ಪುಣ್ಯಸ್ಮರಣೆ ನಿಮಿತ್ತ ಶರಣ ಸಂಸ್ಕೃತಿ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಬಸವಧರ್ಮ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನಸಿಕ ಸದೃಢತೆಗಾಗಿ ಪ್ರತಿಯೊಬ್ಬರೂ ಇಷ್ಟಲಿಂಗ ಪೂಜಿಸಬೇಕು. ದುಡ್ಡಿಗಿಂತ ಮಾನಸಿಕ ನೆಮ್ಮದಿ ಮುಖ್ಯಎಂದರು.
ರಬಕವಿಯ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲರೂ ಶರಣರು ತೋರಿದ ದಾರಿಯಲ್ಲಿ ಸಾಗಬೇಕು. ಮಕ್ಕಳು ಮೊಬೈಲ್, ಟಿವಿ ಬಿಟ್ಟು ವಚನಗಳ ಅಧ್ಯಯನ ಮಾಡಬೇಕು ಎಂದರು.
ಶಿಕ್ಷಕ ಶಿವಶಂಕರ ಬಡಿಗೇರ ಮಾತನಾಡಿದರು. ಸಂಗನಗೌಡ ಪಾಟೀಲ, ಈರಣ್ಣ ಅಜೂರ, ಮಲ್ಲಪ್ಪ ಮಲಕಪ್ಪನವರ, ಕೆ.ಎಸ್.ಅವರಾದಿ, ಬಸವಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಿದಾನಂದ ಪಾಟೀಲ, ಮಲ್ಲನಗೌಡ ಪಾಟೀಲ, ಸಂಗಣ್ಣ ಗೂಗವಾಡ, ಡಿ.ಬಿ.ಠಕ್ಕನ್ನವರ ಇತರರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿದರು.