ಎಲಿಮುನ್ನೋಳಿ ಗ್ರಾಮದಲ್ಲಿ ಹೊಳೆಮ್ಮದೇವಿ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಭಕ್ತರಿಗೆ ಆಶೀರ್ವದಿಸಿದರು. ಬಸವರಾಜ ಮುತ್ತೂರ, ದತ್ತಾತ್ರೇಯ ಕುಲಕರ್ಣಿ, ಕೆಂಪಣ್ಣ ಉರಮನಟ್ಟಿ, ಅಂದಾನಿ ಕುಪಾಟಿ ಇತರರಿದ್ದರು.
ಹುಕ್ಕೇರಿ: ಮಠ-ಮಂದಿರಗಳಿಂದ ಸುಖ, ಶಾಂತಿ, ನೆಮ್ಮದಿ ಹಾಗೂ ಏಕಾಗ್ರತೆ ದೊರೆಯುವ ಜತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಎಲಿಮುನ್ನೋಳಿ ಗ್ರಾಮದ ಶಿವಬಸವ ನಗರದ ತೋಟದಲ್ಲಿ ನಿರ್ಮಿಸಿರುವ ಶ್ರೀ ಹೊಳೆಮ್ಮದೇವಿ ಮಂದಿರದ ಉದ್ಘಾಟನೆ ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹಾಲಕ್ಷ್ಮಿ ಹಾಗೂ ರಾಮಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ, ಸುಮಂಗಲೆಯರಿAದ ಆರತಿ ಕಾರ್ಯಕ್ರಮ ಜರುಗಿತು. ಅಂಬಲಿ ಹಾಗೂ ಅನ್ನ ಪ್ರಸಾದ ನೆರವೇರಿತು.
ಗ್ರಾಮದ ಮುಖಂಡರಾದ ಬಸವರಾಜ ಮುತ್ತೂರ, ದತ್ತಾತ್ರೇಯ ಕುಲಕರ್ಣಿ, ಕೆಂಪಣ್ಣ ಉರಮನಟ್ಟಿ, ಅಂದಾನಿ ಕುಪಾಟಿ, ಸದಾಶಿವ ಮುತ್ತೂರ, ಅಜಿತ ಖಾನಾಪುರಿ, ಶಿವಾಜಿ ಖಟ್ರಿ, ಬಾಬು ಗೋಣಿ, ಅಶೋಕ ಕುಪಾಟಿ, ಕಾಡಪ್ಪ ತೇರದಾಳಿ, ಸಂತೋಷ ಮರಡಿ, ಅಜಿತ್ ಮೆಟಗೋಡ್ಲಿ, ರಾಮಪ್ಪ ಖಾನಾಪುರಿ, ರಾಜಶೇಖರ ರೊಡ್ಡಬಸನ್ನವರ, ಸಂತೋಷ ಮುತ್ತೂರ, ಶಂಕರ ಹಂಚಿನಾಳ, ಶಿವು ಬೆಳಗುಂದಿ ಇತರರಿದ್ದರು. ಲಕ್ಷ್ಮಣ ಗೋಣಿ ಸ್ವಾಗತಿಸಿದರು. ಸಿದ್ರಾಮ ಮುತ್ತೂರ ನಿರೂಪಿಸಿದರು.