ದೇಸಾಯರಟ್ಟಿ ವಿವಿಧೋದ್ಧೇಶ ಪಿಕೆಪಿಎಸ್ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೆಶಕರನ್ನು ಸನ್ಮಾನಿಸಲಾಯಿತು. ಪಾಂಡುರಂಗ ಪವಾರ, ಅಶೋಕ ಕದಂ, ಅಂಕುಶ ಸಾಂವತ, ಮಹಾದೇವ ಭೋಸಲೆ ಇತರರಿದ್ದರು.
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ದೇಸಾಯರಟ್ಟಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಾಂಡುರಂಗ ಪವಾರ, ಉಪಾಧ್ಯಕ್ಷರಾಗಿ ಅಶೋಕ ಕದಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶಾ ಬಿರಾದಾರ ಘೋಷಿಸಿದರು.
ಅಧ್ಯಕ್ಷ ಪಾಂಡುರಂಗ ಪವಾರ ಮಾತನಾಡಿ, ಸಂಘದ ಏಳಿಗೆಗಾಗಿ ಶ್ರಮಿಸಲಾಗುವುದು. ರೈತರ ಸಮಸ್ಯೆ ಹಾಗೂ ಬೇಡಿಕೆಗೆ ಸ್ಪಂದಿಸಲಾಗುವುದು ಎಂದರು. ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಅಂಕುಶ ಸಾಂವತ, ಮಹಾದೇವ ಭೋಸಲೆ, ವಿಠ್ಠಲ ಚವ್ಹಾಣ, ಮಾಲನ ಜಾಧವ, ಅಶೋಕ ಚವ್ಹಾಣ, ಸುವರ್ಣಾ ಅವಟಿ, ಸಿದ್ಧರಾಮ ಕಳಸಣ್ಣವರ, ದಿಲೀಪ ಶಿಂಧೆ, ಜ್ಞಾನದೇವ ಸತಪಾಳೆ, ಮುಖಂಡರಾದ ಅಪ್ಪಾಸಾಹೇಬ ಅವಟಿ, ಖಂಡು ಪವಾರ, ಶಿವಪ್ಪ ಗಣಿ, ನಾರಾಯಣ ಸಾವಂತ, ವಿಜಯ ನಿಕ್ಕಂ, ಮುತ್ತಪ್ಪ ಕಳಸಣ್ಣವರ, ರಾಮಪ್ಪ ಚವ್ಹಾಣ, ಸಂತೋಷ ಕದಂ, ನಾನಾಸಾಹೇಬ ಖೋತ, ಆನಂದ ಸೂರ್ಯವಂಶಿ, ರಮೇಶ ಭೋಸಲೆ, ಸಂದೀಪ ಶಿಂಧೆ, ಶಶಿಕಾಂತ ಪವಾರ, ಮಲ್ಲಪ್ಪ ಅವಟಿ, ಬೈರುಬಾ ಪವಾರ, ಅಪ್ಪಾಸಾಹೇಬ ಮುರಗ್ಯಾಗೋಳ, ಮುಖ್ಯಕಾರ್ಯನಿರ್ವಾಹಕ ಅಣ್ಣಾಸಾಹೇಬ ಚವ್ಹಾಣ ಇತರರಿದ್ದರು.