ಬೆಳಗಾವಿಯ ಕೆಎಲ್‌ಇ ವೇಣುಧ್ವನಿ ಎಫ್‌ಎಂ ಪೋನ್ ಇನ್ ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ ಎಸ್. ವಸೆದರ್ ಮಾತನಾಡಿದರು. ಮನಿಷ ಪಿ.ಎಸ್. ಮತ್ತು ಮಂಜುನಾಥ ಪೈ ಇದ್ದಾರೆ.  
ಬೆಳಗಾವಿ

ಪಂಚಕರ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಡಿ.ವಿ. ಕಮ್ಮಾರ
ಬೆಳಗಾವಿ : ಪಂಚಕರ್ಮ ಚಿಕಿತ್ಸೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹವು ಸದೃಡವಾಗುತ್ತದೆ. ಆಹಾರ, ವಾಯುಗುಣ ಮತ್ತು ಋತುಮಾನಗಳಿಗೆ ಅನುಗುಣವಾಗಿ ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ ಎಂದು ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ತಜ್ಞ ವೈದ್ಯ ಮತ್ತು ಪ್ರಾಧ್ಯಾಪಕ ಡಾ.ವಿಶ್ವನಾಥ ಎಸ್. ವಸೆದರ್ ಹೇಳಿದರು.
ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ ಕೇಂದ್ರದಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ನೇರ ಫೋನ್-ಇನ್ ಮೂಲಕ ಏರ್ಪಡಿಸಿದ್ದ ಪಂಚಕರ್ಮ: ವಿಧಗಳು ಮತ್ತು ಉಪಯೋಗ ಕುರಿತು ಜನಜಾಗೃತಿಯಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸ್ತುತ ಅವರು ಮಾತನಾಡಿದರು.
ಆಯುರ್ವೇದ ಸಾವಿರಾರು ವರ್ಷಗಳಿಂದ ಭಾರತೀಯರ ಚಿಕಿತ್ಸಾ ಪದ್ಧತಿಯಲ್ಲಿತ್ತು. ಇಂದಿಗೂ ಕೂಡ ಕೆಲವರು ಆಯುರ್ವೇದ ಚಿಕಿತ್ಸೆಯನ್ನೆ ಇಷ್ಟ ಪಡುತ್ತಾರೆ. ಆಯುರ್ವೇದಲ್ಲಿ ಒಂದು ಚಿಕಿತ್ಸೆ ಎಂದರೆ ಅದು ಪಂಚಕರ್ಮ, ಇದು ದೇಹದಲ್ಲಿನ ಅನಾರೋಗ್ಯವನ್ನು ದೂರ ಮಾಡಿ ಆರೋಗ್ಯ ನೀಡುವಲ್ಲಿ ಪ್ರಮುಖ ಪಾತ್ರ ವಹಸುತ್ತದೆ ಮತ್ತು ಪಂಚಕರ್ಮ ಮುಖ್ಯವಾಗಿ ದೇಹವನ್ನು ನಿರ್ವಿಷಗೊಳಿಸಲು ಬಳಸುವಂತಹ ಚಿಕಿತ್ಸೆ ಕೂಡ ಆಗಿದೆ. ಈ ಒಂದು ಚಿಕಿತ್ಸೆಯಿಂದ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿರುವುದು ಎಂದು ತಿಳಿಸಿದರು.
ಪಂಚಕರ್ಮದಲ್ಲಿ ವಮನಕ್ರಿಯೆ, ವಿರೇಚನ, ಬಸ್ತಿ, ನಾಸ್ಯ ಚಿಕಿತ್ಸೆ ಮತ್ತು ರಕ್ತ ಮೊಕ್ಷಣ ಎಂಬ ವಿಧಗಳಿವೆ. ಈ ಎಲ್ಲ ಚಿಕಿತ್ಸೆಗಳನ್ನು ಆಯುರ್ವೇದ ತಜ್ಞರ ಸಲಹೆ ಪಡೆದುಕೊಂಡು ಈ ಐದು ಚಿಕಿತ್ಸೆಯಲ್ಲಿ ಯಾವುದಾದರೂ ಒಂದನ್ನು ಆಯಾ ವ್ಯಕ್ತಿಯಲ್ಲಿರುವ ಅನಾರೋಗ್ಯಕ್ಕೆ ಅನುಗುಣವಾಗಿ ಪಡೆದುಕೊಳ್ಳಬಹುದು ಎಂದು ಹೇಳುತ್ತ, ಬಿ.ಎಂ.ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳ ಕುರಿತು ಮಾಹಿತಿ ಹಂಚಿಕೊಂಡರು.
ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.