ಶಿರಗೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹೋತ್ಸವದ ದೀಕ್ಷಾಕಲ್ಯಾಣ ರಾಜ್ಯಾಭಿಷೇಕ ಕಾರ್ಯಕ್ರಮದಲ್ಲಿ ರಮೇಶ ಕತ್ತಿ, ಮಹಾವೀರ ನಿಲಜಗಿ ಅವರನ್ನು ಸನ್ಮಾನಿಸಲಾಯಿತು. ವೀರಕುಮಾರ ಪಾಟೀಲ, ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಭರತೇಶ ಪಾಟೀಲ, ಗೊಮ್ಮಟೇಶ ಪಾಟೀಲ ಇತರರಿದ್ದರು. 
ಬೆಳಗಾವಿ

ಶಿರಗೂರಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಸಂಭ್ರಮ

ಕುಡಚಿ: ಶಿರಗೂರ ಗ್ರಾಮದಲ್ಲಿ ೧೦೦೮ ಮೂಲನಾಯಕ ಆದಿನಾಥ ತೀರ್ಥಂಕರ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬ ತಥಾ ಶಿಖರಸ್ಥ ಸಿಂಹಾಸನೋಪರಿ ೧೦೦೮ ಶಾಂತಿನಾಥ ತೀರ್ಥಂಕರ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಮೂರನೇ ದಿನದ ಕಾರ್ಯಕ್ರಮ ಬುಧವಾರ ಜರುಗಿದವು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಜೈನ ಧರ್ಮ ಆಚರಣೆಗಳು ಶ್ರೇಷ್ಠವಾಗಿವೆ. ಪಂಚಕಲ್ಯಾಣ ಪೂಜೆಗಳಿಂದ ಜನರಲ್ಲಿ ಜೈನ ಧರ್ಮದ ತತ್ತ್ವ ಹಾಗೂ ಸಂಸ್ಕಾರ ನೀಡುವ ಕಾರ್ಯವನ್ನು ಮುನಿ ಮಹಾರಾಜರು ನಡೆಸುತ್ತಿದ್ದಾರೆ. ಧರ್ಮ, ಸಂಸ್ಕಾರ, ಸಮಾಜ ಉಳಿಯಬೇಕಿದೆ ಎಂದರು.
೧೦೮ ಡಾ.ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ಆರ್ಯಿಕಾ ೧೦೫ ಚೇತನಾಮತಿ ಮಾತಾಜಿ, ಅಭಿನವ ಕಲ್ಮೇಶ್ವರ ಮಹಾರಾಜರು, ಮಾಜಿ ಸಚಿವ ವೀರಕುಮಾರ ಪಾಟೀಲ, ದಕ್ಷಿಣ ಭಾರತ ಜೈನ ಸಭೆ ಉಪಾಧ್ಯಕ್ಷ ಅಭಿನಂದನ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ, ಭರತೇಶ ಪಾಟೀಲ, ಗೊಮ್ಮಟೇಶ ಪಾಟೀಲ, ಪಾರಿಸ್ ಉಗಾರೆ, ಎಚ್.ಎನ್.ಘಾಳಿ, ಧನ್ಯಕುಮಾರ ಪಾಟೀಲ, ಸುರೇಶ ನಾಂದ್ರೆ, ರಾವಸಾಬ ನಾಂದ್ರೆ, ರಮೇಶ ಐನಾಪುರೆ, ದಿಲೀಪ ಅಕ್ಕೂಳೆ, ಜಿನ್ನಪ್ಪ ಆಸ್ಕಿ, ಡಾ.ಸತೀಶ ಕಲ್ಲಟ್ಟಿ, ಬಾಪುಸಾಹೇಬ ಪಾಟೀಲ ಇತರರಿದ್ದರು.