ಮುರಗೋಡ ಮಹಾಂತ ದುರದುಂಡೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ನೀಲಕಂಠ ಸ್ವಾಮೀಜಿ, ಕಾಶಿನಾಥ ಸ್ವಾಮೀಜಿ, ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ನಾಗರಾಜ ದೇಸಾಯಿ, ಜಯಶ್ರೀ ಹಿರೇಮಠ ಇತರರಿದ್ದರು. 
ಬೆಳಗಾವಿ

ಮಠ-ಮಾನ್ಯಗಳ ಕಾರ್ಯ ಮಾದರಿ

ಮುರಗೋಡ:
ಮಹಾಂತ ದುರದುಂಡೀಶ್ವರ ಮಠದಲ್ಲಿ ಲಿಂ.ಮಹಾಂತ ಶಿವಯೋಗಿಗಳ 157ನೇ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಉಪನ್ಯಾಸ ನೀಡಿದರು.
ಲಿಂ.ಮಹಾಂತ ಶಿವಯೋಗಿಗಳು ಸಮಾಜದ ಏಳಿಗೆಗಾಗಿ ಶತಮಾನೋತ್ಸವ ಸವಿನೆನಪಿಗಾಗಿ ಅಂದು ಧಾರವಾಡದಲ್ಲಿ ಬಸವ ಅಧ್ಯಯನ ಪೀಠ ನಿರ್ಮಿಸಿರುವ ಕಾರ್ಯ ಸ್ಮರಣೀಯ ಎಂದರು.
ನೀಲಕಂಠ ಸ್ವಾಮೀಜಿ ಮಾತನಾಡಿ, ಲಿಂ.ಮಹಾಂತ ಅಜ್ಜನ ಮಹಿಮೆಯಿಂದ ಮುರಗೋಡ ಪುಣ್ಯಕ್ಷೇತ್ರವಾಗಿದ್ದು, ಭಕ್ತರ ಸಹಕಾರದಿಂದ ಶ್ರೀಮಠ ಪ್ರಗತಿ ಪಥದತ್ತ ಸಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗುರುಭವನ ನಿರ್ಮಾಣ ಕಾರ್ಯಕ್ಕೆ ಎಲ್ಲ ಭಕ್ತರು ಕೈಜೋಡಿಸಬೇಕು ಎಂದು ತಿಳಿಸಿದರು.
ಧರ್ಮದರ್ಶಿ ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ನಾಗರಾಜ ದೇಸಾಯಿ, ಶಿವನಗೌಡ ಪಾಟೀಲ, ವಿಜಯ ಸಾಣಿಕೊಪ್ಪ, ಜಯಶ್ರೀ ಹಿರೇಮಠ, ಪಾರ್ವತಿ ಹುಲ್ಲೇಪ್ಪನವಮಠ, ಲಕ್ಷ್ಮೀ ಗುಡಸೆ, ಮಲ್ಲನಗೌಡ ಗೌಡತಿ, ಮಲ್ಲಪ್ಪ ಕುರಬೇಟ, ಪ್ರಕಾಶ ಕಾರಗಿ, ಸಂಗಪ್ಪ ಬೆಳಗಾವಿ, ಸುರೇಶ ಮ್ಯಾಕಲ, ಸಂತೋಷ ಹಿರೇಮಠ ಇತರರಿದ್ದರು.