ಗೋವನಕೊಪ್ಪ ಕೆ.ಎಸ್.ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಪ್ರಕಾಶ ವಾಲಿ, ನೀಲಕಂಠ ಸಿದ್ದಬಸನ್ನವರ, ಶಂಕರ ಇಟ್ನಾಳ ಇತರರಿದ್ದರು. 
ಬೆಳಗಾವಿ

ಓಕುಳಿ ಹಬ್ಬ ಸಂಸ್ಕೃತಿ ಪ್ರತೀಕ

ಮುಗಳಿಹಾಳ:
ಸಮೀಪದ ಗೋವನಕೊಪ್ಪ ಕೆ.ಎಸ್.ಗ್ರಾಮದಲ್ಲಿ ಗೆಳೆಯರ ಬಳಗದ ಆಶ್ರಯದಲ್ಲಿ ಮಾರುತೇಶ್ವರ ಓಕುಳಿ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒತ್ತಡದ ಬದುಕಿನಲ್ಲಿ ಹಾಸ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸುವ ಮೂಲಕ ಮನಸ್ಸಿಗೆ ಮುದ ನೀಡುತ್ತವೆ. ಸಮಾಜದಲ್ಲಿ ಸಹೋದರತ್ವ, ಬಾಂಧವ್ಯ ವೃದ್ಧಿಸುವಲ್ಲಿ ಸಾಮಾಜಿಕ ಕಾರ್ಯ ಸಹಕಾರಿಯಾಗಿವೆ ಎಂದರು.
ಪ್ರಕಾಶ ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಮಲಿಕಸಾಬ್ ಬಾಗವಾನ್, ಬಾಳಪ್ಪ ಕೌಜಲಗಿ, ಅಶೋಕ ಕುಡಚಿ, ನಿಖಿಲ ಪಾಟೀಲ, ಶಿವಾನಂದ ತಪಸಿ, ಗಣಪತಿ ಐದುಡ್ಡಿ, ಬಸನಗೌಡ ಪಾಟೀಲ, ಲಕ್ಕಪ್ಪ ಮರಕುಂಬಿ, ಕೃಷ್ಣ ಐದುಡ್ಡಿ, ಸುಭಾಸ ಐದುಡ್ಡಿ, ಸಿಂಧೂರ ತೆಗಿ ಇತರರಿದ್ದರು.