ಬೈಲಹೊಂಗಲದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಜಾಗೃತಿ ಕರಪತ್ರ ಪ್ರದರ್ಶಿಸಿದರು. ನ್ಯಾಯಾಧೀಶರಾದ ರವಿ ಚವ್ಹಾಣ, ರೋಹಿಣಿ ಬಸ್ಸಾಪುರ, ಎಚ್.ಎನ್.ಶಿರಹಟ್ಟಿ ಇತರರಿದ್ದರು. 
ಬೆಳಗಾವಿ

ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ

ಅರ್ಚನಾ ಜಾಧವ
ಬೈಲಹೊಂಗಲ: ಪ್ರತಿಯೊಬ್ಬರೂ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವುದರಿಂದ ಹೆಚ್ಚುತ್ತಿರುವ ಅಪಘಾತ ತಡೆಯಲು ಸಾಧ್ಯವಾಗುತ್ತದೆ. ಹೆಲ್ಮೆಟ್, ಸಿಟ್ ಬೆಲ್ಟ್ ಅಗತ್ಯವಾಗಿ ಧರಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.
ನಗರದ ಚನ್ನಮ್ಮ ಸಮಾಧಿ ಸ್ಥಳದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಕೆಎಲ್‌ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ ಮಾತನಾಡಿ, ರಸ್ತೆ ಸುರಕ್ಷತೆ ಕೇವಲ ಕಾನೂನು ಪಾಲನೆಯಷ್ಟೇ ಅಲ್ಲ, ಅದು ಸಾಮಾಜಿಕ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಜಾಗೃತಿಯ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದರು.
ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪ್ರಾಚಾರ್ಯ ಶ್ರೀಧರ ನಿರಡಿ ಮಾತನಾಡಿದರು.
ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ಬಸವರಾಜ ನಾಯಕ, ಸಾರಿಗೆ ಅಧಿಕಾರಿ ಜಯಾನಂದ ನರಸನ್ನವರ, ಮೋಟಾರು ವಾಹನ ನಿರೀಕ್ಷಕ ಅನಿಲಕುಮಾರ ಪಾತ್ರೋಟ್, ತಾಪಂ ಇಒ ಸಂಜೀವ ಜುನ್ನೂರ, ಟಿಎಚ್‌ಒ ಡಾ.ಎಸ್.ಎಸ್.ಸಿದ್ದನ್ನವರ, ಘಟಕ ವ್ಯವಸ್ಥಾಪಕ ಮಹೇಶ ತಿರಕನ್ನವರ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಸಿದ್ರಾಮಣಿ, ಕಾರ್ಯದರ್ಶಿ ವಿ.ಜಿ.ಕಟದಾಳ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ ಇತರರಿದ್ದರು.