ನಿಪ್ಪಾಣಿಯಲ್ಲಿ ಗುಂಡುಕಲ್ಲು ಎತ್ತುವ ಸ್ಪರ್ಧೆ ಜರುಗಿತು. 
ಬೆಳಗಾವಿ

ಗಮನಸೆಳೆದ ಗ್ರಾಮೀಣ ಸಾಹಸ ಕ್ರೀಡೆಗಳು

ನಿಪ್ಪಾಣಿ: ಪಟ್ಟಣದಲ್ಲಿ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಜೊಲ್ಲೆ ಗ್ರೂಪ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಕೃಷಿ ಉತ್ಸವದಲ್ಲಿ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಸಂಗ್ರಾಮ ಕಲ್ಲು ಹಾಗೂ ಗುಂಡುಕಲ್ಲು ಎತ್ತುವ ಸ್ಪರ್ಧೆ ಜರುಗಿದವು.
ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಬಿಲ್ಲೂರ ಗ್ರಾಮದ ಶೇಖಪ್ಪ ಯಲವಾರ ಪ್ರಥಮ ಸ್ಥಾನ ಪಡೆದು ೧೫ ಸಾವಿರ ರೂ., ಶೇಗುಣಸಿಯ ಅಮೃತ ಗೌಡನವರ ದ್ವಿತೀಯ ಸ್ಥಾನ ಪಡೆದು ೧೨ ಸಾವಿರ ರೂ. ಹಾಗೂ ಸಂಗಣ್ಣ ಗೌಡನವರ ತೃತೀಯ ಸ್ಥಾನದೊಂದಿಗೆ ೧೦ ಸಾವಿರ ರೂ. ಬಹುಮಾನ ಪಡೆದರು.
ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಆಸಂಗಿ ಗ್ರಾಮದ ಅಫಜಲ್ ಮುಜಾವರ್ ಪ್ರಥಮ ಸ್ಥಾನ ಪಡೆದು ೧೫ ಸಾವಿರ ರೂ., ಸವದತ್ತಿಯ ಸಬೀಬ್ ಪೈಲವಾನ್ ದ್ವಿತೀಯ ಸ್ಥಾನದೊಂದಿಗೆ ೧೨ ಸಾವಿರ ರೂ., ಬಿಸನಾಳ ಗ್ರಾಮದ ಕಿರಣ ಅರಕೆ ತೃತೀಯ ಸ್ಥಾನದೊಂದಿಗೆ ೧೦ ಸಾವಿರ ರೂ. ಬಹುಮಾನ ಪಡೆದರು.
ಹಲಗಿ ವಾದನ ಸ್ಪರ್ಧೆ: ಭಾನುವಾರ ನಡೆದ ಹಲಗಿವಾದನ ಸ್ಪರ್ಧೆಯಲ್ಲಿ ಮಹಾರಾಷ್ಟçದ ಕುರುಂದವಾಡದ ರಣವೀರ ಆವಳೆ ಪ್ರಥಮ ಸ್ಥಾನ ಪಡೆದು ೧೦ ಸಾವಿರ ರೂ. ಬಹುಮಾನ ಪಡೆದರು. ಕೊಲ್ಲಾಪುರದ ಸಾಗರ ಸಾಠೆ ದ್ವಿತೀಯ ಸ್ಥಾನದೊಂದಿಗೆ ೭.೫ ಸಾವಿರ ರೂ. ಬಹುಮಾನ, ಪಾಚಗಾವ್‌ನ ಯುವರಾಜ ಗಾಯಕವಾಡ ತೃತೀಯ ಸ್ಥಾನದೊಂದಿಗೆ ೫ ಸಾವಿರ ರೂ. ಬಹುಮಾನ, ಯಡ್ರಾವನ ಸೌರಭ ಅಡವಾಣೆ ನಾಲ್ಕನೇಯ ಸ್ಥಾನದೊಂದಿಗೆ ೩ ಸಾವಿರ ರೂ. ಬಹುಮಾನ ಮತ್ತು ಸಾಂಗಾವ್‌ನ ಕೃಷ್ಣಾತ ಘುಳೆ ಐದನೇಯ ಸ್ಥಾನದೊಂದಿಗೆ ೨ ಸಾವಿರ ರೂ. ಬಹುಮಾನ ಪಡೆದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕಿ ಶಶಿಕಲಾ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ವಿಜೇತರಿಗೆ ಬಹುಮಾನ ವಿತರಿಸಿದರು. ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಇತರರು ಇದ್ದರು.