ಬೆಳಗಾವಿ: ರಂಗ ಸೃಷ್ಟಿ ಸಾಂಸ್ಕೃತಿಕ ಸಂಘದ 2025ನೇ ಸಾಲಿನ ರಂಗಸಮ್ಮಾನ ಪ್ರಶಸ್ತಿಗೆ ಹಿರಿಯ ನಟಿ, ಸಪ್ತಸ್ವರ ಸಂಗೀತ ವಿದ್ಯಾಲಯ ಮುಖ್ಯಸ್ಥೆ ನಿರ್ಮಲಾ ಪ್ರಕಾಶ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಕೋಶಾಧಿಕಾರಿ ಶಾಂತಾ ಆಚಾರ್ಯ, ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ.ರಾಮಕೃಷ್ಣ ಮರಾಠೆ, ಶಿರೀಷ ಜೋಶಿ, ಸುನೀತಾ ಸುರೇಶ, ರಮೇಶ ಮಿರ್ಜಿ, ಶರಣಯ್ಯ ಮಠಪತಿ, ಕಲಾವಿದರಾದ ವಿಶ್ವನಾಥ ದೇಸಾಯಿ, ವಾಮನ ಮಳಗಿ, ಶಾಂತಾ ಜಂಗಲ ಇತರರಿದ್ದರು.
ಕಳೆದ 30 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ನಿರ್ಮಲಾ ಪ್ರಕಾಶ, ಹಲವು ನಾಟಕಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.‘ಮಿಂಚು’ ನಾಟಕದ ಉದ್ಧವ ಪಾತ್ರ ಹಾಗೂ ಗಿರೀಶ ಕಾರ್ನಾಡ್ ರಚನೆಯ ‘ವಾಸಾಂಸಿ ಜೀರ್ಣಾನಿ’ ನಾಟಕದ ಪ್ರಧಾನ ಪಾತ್ರ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿವೆ. ವಿವಿಧ ರಂಗತಂಡಗಳಲ್ಲಿ ಕಾರ್ಯನಿರ್ವಹಿಸಿ, ಈಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.