ಬೈಲಹೊಂಗಲ ಕುರುಬರ ಗಲ್ಲಿಯಲ್ಲಿನ ಬೀರಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಸತ್ತಿಗೆ ತರಲಾಯಿತು. ವಿಜಯಕುಮಾರ ದಳವಾಯಿ, ಮುಖಂಡರಾದ ಲಕ್ಷ್ಮಣ ಸೋಮನಟ್ಟಿ, ಬೀರಪ್ಪ ಕುರುಬರ ಇತರರಿದ್ದರು. 
ಬೆಳಗಾವಿ

ಬೀರಲಿಂಗೇಶ್ವರ ದೇಗುಲಕ್ಕೆ ನೂತನ ಸತ್ತಿಗೆ

ಬೈಲಹೊಂಗಲ: ನಗರದ ಕುರುಬರ ಗಲ್ಲಿಯಲ್ಲಿನ ಬೀರಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಸತ್ತಿಗೆ ತರಲಾಯಿತು. ಚಿಂಚಲಿ ಕ್ಷೇತ್ರದಿಂದ ತರಲಾಗಿದ್ದ ಸತ್ತಿಗೆಯನ್ನು ನಗರದ ಮರಡಿ ಬಸವೇಶ್ವರ ದೇವಸ್ಥಾನದಿಂದ ಕೊಪ್ಪದ ಗಲ್ಲಿ, ಗೊಂಬಿಗುಡಿ ಮಾರ್ಗವಾಗಿ ಡೊಳ್ಳುವಾದ್ಯ ಹಾಗೂ ಮುತ್ತೈದೆಯರ ಆರತಿಯೊಂದಿಗೆ ವಿಜಂಭಣೆಯಿಂದ ಬರಮಾಡಿಕೊಳ್ಳಲಾಯಿತು. ಭಕ್ತರು ದಾರಿಯುದ್ಧಕ್ಕೂ ಭಂಡಾರ ಹಾರಿಸಿದರು.
ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯ ನೆರವೇರಿತು. ತಾಲೂಕು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ವಿಜಯಕುಮಾರ ದಳವಾಯಿ, ಮುಖಂಡರಾದ ಲಕ್ಷ್ಮಣ ಸೋಮನಟ್ಟಿ, ಬೀರಪ್ಪ ಕುರುಬರ, ಬಾಬು ಕೂಡಸೋಮಣ್ಣವರ, ಗುರು ನೀಲಗಾರ, ಸಾತಪ್ಪ ಹಳ್ಳೂರ, ಮಂಜುನಾಥ ಹಳ್ಳೂರ, ಮುದಕಪ್ಪ ಹೂಲಿ, ಮುದಕಪ್ಪ ರೇವಣ್ಣವರ, ಶ್ರೀಶೈಲ ಕೊತಂಬ್ರಿ, ಮಾರುತಿ ಪೂಜೇರಿ, ಚಂದ್ರು ಅಜ್ಜನಕಟ್ಟಿ, ಮಲ್ಲಿಕಾರ್ಜುನ ಗೋವನಕೊಪ್ಪ, ಕ್ಕಿರಪ್ಪ ಕುದರಿ, ಮಲ್ಲಿಕಾರ್ಜುನ ದುಬ್ಬನಮರಡಿ, ಮಲ್ಲವ್ವ ಬುಡರಕಟ್ಟಿ ಮತ್ತಿತರರು ಇದ್ದರು.