ನೇಸರಗಿಯ ಹಳ್ಳದ ಬಳಿ ಸೇತುವೆ ನಿರ್ಮಾಣ ಕಾಮಗಾರಿಗೆ ಗಣ್ಯರು ಚಾಲನೆ ನೀಡಿದರು. ಶಾಸಕ ಬಾಬಸಾಹೇಬ ಪಾಟೀಲ, ಶಿವನಗೌಡ ಪಾಟೀಲ, ಎ.ಆರ್.ಮಾಳಣ್ಣವರ, ಅನಿಲ ಎಂ., ಆನಂದ ಕಿರಗಿ ಇತರರಿದ್ದರು. 
ಬೆಳಗಾವಿ

ಸೇತುವೆ ಎತ್ತರಿಸಲು ಅಗತ್ಯ ಕ್ರಮ

ನೇಸರಗಿ: ಕಿತ್ತೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಎಲ್ಲ ಸೇತುವೆ ಎತ್ತರಿಸುವ ಹಾಗೂ ಅಗಲೀಕರಣ ಕಾಮಗಾರಿ ಕೈಗೊಳ್ಳುವ ಮೂಲಕ ಜನರ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಗ್ರಾಮದ ಹಳ್ಳದ ಬಳಿ ಕೊಳದೂರ-ದೇಶನೂರ ಮಾರ್ಗವಾಗಿ ಬೆಳಗಾವಿಗೆ ತೆರಳುವ ರಸ್ತೆಯಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನೇಸರಗಿ ಸೇತುವೆ ಕೆಳಮಟ್ಟದಲ್ಲಿದ್ದು, ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಸಾರ್ವಜನಿಕರಿಗೆ ದಾಟಲು ತೊಂದರೆಯಾಗುತ್ತಿತ್ತು. ಹೀಗಾಗಿ, ಸೇತುವೆ ಎತ್ತರಿಸುವ ಮೂಲಕ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪಿಡಬ್ಲ್ಯುಡಿ ಎಇಇ ಅನಿಲ ಎಂ., ಆನಂದ ಕಿರಗಿ, ಎ.ಆರ್.ಮಾಳಣ್ಣವರ, ಸಚಿನ ಪಾಟೀಲ, ಭರಮಣ್ಣ ಸತ್ಯಣ್ಣವರ, ಸುರೇಶ ಅಗಸಿಮನಿ, ಬಸವರಾಜ ಚಿಕ್ಕನಗೌಡರ, ಶಿವನಗೌಡ ಪಾಟೀಲ, ಸುಜಾತಗೌಡ ಪಾಟೀಲ, ಪ್ರಕಾಶ ತೋಟಗಿ, ನಿಂಗಪ್ಪ ತಳವಾರ, ಶಿವನಪ್ಪ ಮದೆಣ್ಣವರ, ಸುರೇಶ ಕಂಡ್ರಿ, ಸಿದ್ದಯ್ಯ ಚರಂತಿಮಠ, ಶಂಕರ ತಿಗಡಿ, ಶೀತಲಕುಮಾರ ಕಾಡಣ್ಣವರ, ಯಮನಪ್ಪ ಪೂಜೇರಿ ಇದ್ದರು.