ಗೋಕಾಕ ನಗರದಲ್ಲಿ ಕೃಷಿ ಇಲಾಖೆ ಸಹಾಯಧನ ಯೋಜನೆಯಡಿ ಶಾಸಕ ರಮೇಶ ಜಾರಕಿಹೊಳಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿದರು. ಟಿ.ಆರ್.ಕಾಗಲ್, ಎಂ.ಎಲ್.ತೋಳಿನವರ ಇತರರಿದ್ದರು. 
ಬೆಳಗಾವಿ

ರೈತರಿಗೆ ಅಗತ್ಯ ಕೃಷಿ ಸೌಲಭ್ಯ

ರಾಘವೇಂದ್ರಗೌಡ ಭೀ ಪಾಟೀಲ್
ಗೋಕಾಕ:
ನಗರದ ಗೃಹಕಚೇರಿಯಲ್ಲಿ ಕೃಷಿ ಇಲಾಖೆ ಸಹಾಯಧನ ಯೋಜನೆಯಡಿ ರೈತರಿಗೆ ಮಂಗಳವಾರ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ರೈತರಿಗೆ ಅವಶ್ಯವಿರುವ ಸೋಯಾಬಿನ್, ಗೋವಿನಜೋಳ, ಸೂರ್ಯಕಾಂತಿ ಹಾಗೂ ಹೈಬ್ರೀಡ್ ಜೋಳ ಸೇರಿದಂತೆ ಅಗತ್ಯ ಪ್ರಮಾಣದಲ್ಲಿ ವಿವಿಧ ಬೀಜಗಳ ದಾಸ್ತಾನು ಇದೆ.
ರೈತರು ಕೃಷಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಆಧುನಿಕ ಪದ್ಧತಿ ರೂಢಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದರು.
ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಎಂ.ಎಲ್.ತೋಳಿನವರ, ಮುಖಂಡರಾದ ಸುರೇಶ ಸನದಿ, ಕಾಂತು ಎತ್ತಿನಮನಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.