ಐನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿರುವ ರಾಷ್ಟçಮಟ್ಟದ ಎ-ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿ ಕುರಿತು ಅಪ್ಪು ಪೂಜಾರಿ ಮಾಹಿತಿ ನೀಡಿದರು. ಪ್ರವೀಣ ಗಾಣಿಗೇರ, ಸಂಜು ಭಿರಡಿ, ಗುಂಡು ಖವಟಕೊಪ್ಪ ಇತರರಿದ್ದರು. 
ಬೆಳಗಾವಿ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ನಾಡಿದ್ದಿಂದ

ಐನಾಪುರ: ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ೬೬ನೇ ಜನ್ಮದಿನದ ಪ್ರಯುಕ್ತ ಯುವನಾಯಕ ಚಿದಾನಂದ ಸವದಿ ಅಭಿಮಾನಿ ಬಳಗದಿಂದ ಪಿಎಂಶ್ರೀ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಮೈದಾನದಲ್ಲಿ ಫೆ.೧೫, ೧೬ರಂದು ರಾಷ್ಟ್ರಮಟ್ಟದ ಎ-ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬಡ್ಡಿ ಅಮೇಚೂರ್‌ಅಸೋಷಿಯೇಶನ್ ತಾಲೂಕು ಅಧ್ಯಕ್ಷ ಅಪ್ಪು ಪೂಜಾರಿ ಹೇಳಿದರು.
ಪಟ್ಟಣದ ಪಿಎಂಶ್ರೀ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಮೈದಾನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹರಿಯಾಣ, ಗುಜರಾತ, ರಾಜಸ್ಥಾನ. ಪಂಜಾಬ್, ದೆಹಲಿ, ನಾಸಿಕ, ಮುಂಬೈ, ಪುಣೆ, ಸಾತಾರಾ, ಕೊಲ್ಲಾಪುರ, ಸಾಂಗಲಿ, ಬೆಂಗಳೂರು, ಮೂಡಬಿದ್ರೆ, ಉಜಿರೆ ಸೇರಿ ವಿವಿಧ ಭಾಗಗಳಿಂದ ಕಬಡ್ಡಿ ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ೧ ಲಕ್ಷ ರೂ., ದ್ವಿತೀಯ ೭೫ ಸಾವಿರ ರೂ., ತೃತೀಯ ೫೦ ಸಾವಿರ ರೂ., ಚತುರ್ಥ ೨೫ ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪ್ರವೀಣ ಗಾಣಿಗೇರ, ಸಂಜು ಭಿರಡಿ, ಅರುಣ ಗಾಣಿಗೇರ, ಗುಂಡು ಖವಟಕೊಪ್ಪ, ಪುನ್ನಪ್ಪ ಲೋಂಡೆ, ದಾದಾ ಜಂತೆನ್ನವರ, ಸಂತೋಷ ಪಾಟೀಲ, ಬಾಹುಬಲಿ ಕುಸನಾಳೆ, ಪ್ರಕಾಶ ಚಿನಗಿ, ಅಶೋಕ ಅಪರಾಜ, ಹನುಮಂತ ಗುರವ, ಕಾಕಾಸಾಹೇಬ ಕೋರ್ಬು, ಅಪ್ಪಾಸಾಹೇಬ ಅಪರಾಜ, ರಾಮಾ ಮಾನೆ, ಪ್ರಕಾಶ ಗಾಣಿಗೇರ, ಸುಮೀತ್ ಕುಸನಾಳೆ, ಸಂಗಪ್ಪ ಖೋತ, ಸುನೀಲ ಅವಟಿ ಇತರರಿದ್ದರು.