ಖಾನಾಪುರ ತಾಲೂಕಿನ ನಂದಗಡದಲ್ಲಿನ ವೀರಭೂಮಿ ಉದ್ಘಾಟನೆ ಕಾರ್ಯಕ್ರಮದ ಸಿದ್ಧತೆಗಳನ್ನು ಭಾನುವಾರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಪರಿಶೀಲಿಸಿದರು.
ಬೆಳಗಾವಿ: ಖಾನಾಪುರ ನಂದಗಡದಲ್ಲಿ ಸೋಮವಾರ ನಡೆಯಲಿರುವ ವೀರಭೂಮಿ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಭಾನುವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪರಿಶೀಲಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಜನರ ಆಸನದ ವ್ಯವಸ್ಥೆ, ಕಾರ್ಯಕ್ರಮದ ಸ್ಥಳದಲ್ಲಿ ಮಾಡಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ಕಾರ್ಯಕ್ರಮದ ಭೋಜನದ ವ್ಯವಸ್ಥೆ ಜವಾಬ್ದಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಹಿಸಿಕೊಂಡಿರುವ ಹಿನ್ನೆಲೆ ಭೋಜನ ವ್ಯವಸ್ಥೆಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಮತ್ತು ಭೋಜನದ ವ್ಯವಸ್ಥೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಾಂತೇಶ ಕಲ್ಯಾಣಿ, ಅಭಿಷೇಕ ಹೊಸಮನಿ, ಇರ್ಫಾನ್ ತಾಳಿಕೋಟಿ, ವಸಂತ ನಾಯ್ಕ ಇತರರಿದ್ದರು.