ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಈಟಿ ಮಾತನಾಡಿದರು. ಡಾ.ಅಮರಸಿದ್ಧೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ವಿವೇಕ ಜತ್ತಿ, ಶಂಕರ ಗೋರೋಶಿ ಇತರರಿದ್ದರು.
ಗೋಕಾಕ: ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ 55ನೇ ಜನ್ಮದಿನದ ಅಂಗವಾಗಿ ಜೂ.28ರಂದು ನಗರದ ಮಹಾಲಕ್ಷ್ಮೀ ಸಭಾಂಗಣದಲ್ಲಿ ಬೆಳಗ್ಗೆ 9ರಂದು 55 ತುಲಾಭಾರ ಹಾಗೂ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಂದನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಹೇಳಿದರು.
ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನ್ನಿಧ್ಯವನ್ನು ಘಟಪ್ರಭಾದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಶೂನ್ಯ ಸಂಪಾದನ ಮಠದ ಕಿರಿಯ ಬಸವಪ್ರಭು ಸ್ವಾಮೀಜಿ ವಹಿಸುವರು. ಶಾಸಕ ರಮೇಶ ಜಾರಕಿಹೊಳಿ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಬೆಂಗಳೂರಿನ ಎಡ್ರಿಸ್ ಟೆಕ್ನಾಲಜಿ ಸಿಇಒ ಕಿರಣ ಮುಚ್ಚಂಡಿಮಠ ಭಾಗವಹಿಸಲಿದ್ದಾರೆ. ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳಿಗೆ ಸಮವಸ, ಶಾಲಾ ಬ್ಯಾಗ್, ನೋಟ್‌ಬುಕ್ ಮತ್ತಿತರ ಕಲಿಕಾ ಪರಿಕರಗಳನ್ನು ವಿತರಿಸಲಾಗುವುದು ಎಂದು ಮಲ್ಲಿಕಾರ್ಜುನ ಈಟಿ ತಿಳಿಸಿದರು.
ಅಂಕಲಗಿ ಅಡವಿಸಿದ್ಧೇಶ್ವರ ಮಠದ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ವಿವೇಕ ಜತ್ತಿ, ವಕೀಲ ಶಂಕರ ಗೋರೋಶಿ ಇತರರಿದ್ದರು.