ನದಿ ಇಂಗಳಗಾಂವ ಗ್ರಾಮದ ತಪೋವನದಲ್ಲಿ ಹಮ್ಮಿಕೊಂಡಿದ್ದ ಪ್ರವಚನದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವರಾಜೇಂದ್ರ ಶರಣರು ಇದ್ದರು.
ಅಥಣಿ ಗ್ರಾಮೀಣ: ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಮುರುಘೇಂದ್ರ ಸ್ವಾಮೀಜಿ ರಾಜ್ಯದ ತುಂಬ ಭಕ್ತಿ ಬೆಳಕನ್ನು ಪಸರಿಸಿದ್ದಾರೆ ಎಂದು ಅಥಣಿ ಗಚ್ಚಿನಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಪೇರಗಲ್ ತೋಟದ ತಪೋವನದಲ್ಲಿ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಶಿವಯೋಗಿಗಳ ಜೀರ್ಣೋದ್ಧಾರ ಕಮಿಟಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಯೋಗದ ಮೇರು ಪರ್ವತವಾಗಿದ್ದ ಶಿವಯೋಗಿಗಳು ಸಮಾಜದಲ್ಲಿ ಸತ್ಯ, ಅಹಿಂಸೆ, ಸಹಬಾಳ್ವೆ ಹಾಗೂ ಮಾನವೀಯತೆ ಮಹತ್ವ ಸಾರಿದ್ದಾರೆ. ಅಧಿಕಾರದ ಆಸೆಪಡದೇ ಕಿರಿಯ ಸ್ವಾಮೀಜಿಗಳಿಗೆ ದಾರಿ ಮಾಡಿಕೊಟ್ಟಿದ್ದ, ಅವರ ತ್ಯಾಗ ಇಂದಿನ ಮಠಾಧೀಶರಿಗೆ ಮಾದರಿಯಾಗಿದೆ. ಬಸವಾದರ್ಶ ಪಾಲನೆ ಮಾಡಿ, ಜಾತಿ, ಮತ, ಪಂಥಗಳೆನ್ನದೆ ದಾಸೋಹ ಸೇವೆ ಮಾಡಿದ ಕೀರ್ತಿ ಶಿವಯೋಗಿಗಳಿಗೆ ಸಲ್ಲುತ್ತದೆ. ಪರಂಪರೆ, ಆಚರಣೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.
ಗಚ್ಚಿನಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಿರಬಾರದು. ದೇವರ ಮೇಲೆ ಭಕ್ತಿ, ನಂಬಿಕೆ ದೃಢವಾಗಿರಬೇಕು. ಅಂದಾಗ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದರು.
ನದಿ ಇಂಗಳಗಾಂವ ಶಿವಯೋಗಿಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಝುಂಜರವಾಡದ ಬಸವರಾಜೇಂದ್ರ ಶರಣರು, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಮಲ್ಲಪ್ಪ ಠಕ್ಕಣ್ಣವರ, ಅಪ್ಪಾಸಾಬ ಮದಭಾವಿ, ಅಲಗೌಡ ಮುದಿಗೌಡರ, ಗುರುಬಸು ತೇವರಮನಿ, ಹನುಮಂತ ಸತ್ತಿಗೌಡರ, ಶ್ರೀಶೈಲ ಹಲ್ಯಾಳ, ಕಲ್ಲಪ್ಪ ಠಕ್ಕಣ್ಣವರ, ಕುಮಾರ ಗಿರಿಮಲ್ಲಣ್ಣವರ, ಸಿದ್ದಪ್ಪ ಮದಭಾವಿ, ಬಸವರಾಜ ಅಂಬಿ ಇತರರಿದ್ದರು.