- ಕೊಲೆ ಆರೋಪಿಗಳ ಬಂಧನ
- ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣ
- ತಂದೆಯಿಂದ ನಡೆದಿದ್ದ ಮಗನ ಕೊಲೆ
ತಂದೆಯಿಂದಲೇ ಮಗನ ಕೊಲೆ ಪ್ರಕರಣ
ಬೆಳಗಾವಿ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ನಿವಾಸಿ ನಿಜಗುಣಿ ಬಾಳಾಸಾಹೇಬ ಆಲೂರೆ, ಉಮರಾಣಿ ಗ್ರಾಮದ ನಿವಾಸಿ ಉಸ್ಮಾನ ಸಾಹೇಬಲಾಲ ಮುಲ್ಲಾ, ವಿನಾಯಿಕ ಮಾರುತಿ ಜಿಡ್ಡಿಮನಿ ಬಂಧಿತ ಆರೋಪಿಗಳು.
ಜ.೫ ರಂದು ಹಣದ ವಿಷಯವಾಗಿ ಕಿರಣ ಉರ್ಪ ಬಾಳಾಸಾಹೇಬ ನಿಜಗುಣಿ ಆಲೂರೆ (೩೧) ಕೊಲೆ ನಡೆದಿತ್ತು. ನಂತರ ಹೃದಯಾಘಾತ ಎಂದು ಮೃತದೇಹವನ್ನು ಆತನ ತಂದೆಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಕೊಲೆಯಾದ ಯುವಕನ ತಾಯಿ ನೀಡಿದ ದೂರಿನನ್ವಯ ವಿಚಾರಣೆ ನಡೆಸಿದ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದಾರೆ.