ಮುನವಳ್ಳಿ ಪಟ್ಟಣದಲ್ಲಿ ಇನ್ನರವೀಲ್ ಕ್ಲಬ್ ಆ್ ಮುನವಳ್ಳಿಯ ನೂತನ ಅಧ್ಯಕ್ಷೆ ಸುಷ್ಮಾ ಗೋಮಾಡಿಗೆ ನಿಕಟಪೂರ್ವ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಅಧಿಕಾರ ಹಸ್ತಾಂತರಿಸಿದರು. ಶಾಹೀನ್ ಪಟೇಲ್, ಅನುರಾಧಾ ಬೆಟಗೇರಿ, ಸುಜಾತಾ ಕೋರಿ ಇತರರಿದ್ದರು. 
ಬೆಳಗಾವಿ

ಮುನವಳ್ಳಿ ಇನ್ನರ್‌ವೀಲ್ ಕಾರ್ಯ ಮಾದರಿ

ರಾಘವೇಂದ್ರಗೌಡ ಭೀ ಪಾಟೀಲ್
ಮುನವಳ್ಳಿ:
ಸ್ನೇಹಜ್ಯೋತಿ ಅರ್ಬನ್ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ಇನ್ನರ್‌ವೀಲ್ ಕ್ಲಬ್  ಮುನವಳ್ಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುನವಳ್ಳಿ ಇನ್ನರ್‌ವೀಲ್ ಕ್ಲಬ್ ಚಿಕ್ಕದಾಗಿದ್ದರೂ ಇಲ್ಲಿನ ಸದಸ್ಯರು ಮಾಡುತ್ತಿರುವ ಸಮಾಜಮುಖಿ ಕಾರ್ಯ ಉಳಿದ ಕ್ಲಬ್‌ಗಳಿಗೆ ಮಾದರಿಯಾಗಿವೆ. ಮುಂಬರುವ ದಿನಗಳಲ್ಲಿ ಮುನವಳ್ಳಿ ಕ್ಲಬ್‌ನೊಂದಿಗೆ ಜಂಟಿಯಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕ್ಲಬ್ ಮಾಜಿ ಅಧ್ಯಕ್ಷೆ ಅನುರಾಧಾ ಬೆಟಗೇರಿ ಮಾತನಾಡಿ, ಮುನವಳ್ಳಿ ಇನ್ನರ್‌ವೀಲ್ ಕ್ಲಬ್ ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ ಜತೆಗೆ ಕಳೆದ ಆರು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ಸೇರಿದಂತೆ ಅಗತ್ಯ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಸುಷ್ಮಾ ಗೋಮಾಡಿಗೆ ನಿಕಟಪೂರ್ವ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಅಧಿಕಾರ ಹಸ್ತಾಂತರಿಸಿದರು. ಕ್ಲಬ್ ವತಿಯಿಂದ ಸ್ಥಳೀಯ ವಿ.ಪಿ.ಜೇವೂರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಕಂಪ್ಯೂಟರ್ ದೇಣಿಗೆ ನೀಡಲಾಯಿತು.
ಕ್ಲಬ್‌ನ ನೂತನ ಪದಾಧಿಕಾರಿಗಳಾದ ಸಹನಾ ನಲವಡೆ, ಗೌರಿ ಜಾವೂರ, ಸುಜಾತಾ ಕೋರಿ, ಪ್ರೀತಿ ಕರಿಕಟ್ಟಿ, ಸುಮಾ ಯಲಿಗಾರ, ಅಶ್ವಿನಿ ಬಾಳಿ, ವಿಜಯಲಕ್ಷ್ಮೀ ಮುರಂಕರ, ಭಾರತಿ ಕಟಿಗೆನ್ನವರ, ವೈಷ್ಣವಿ ಶೆಟ್ಟರ, ಗೀತಾ ಜಿಡ್ಡಿಮನಿ, ಶೀಲಾ ಕರಿಕಟ್ಟಿ, ಉಮಾ ಹಂಪಣ್ಣವರ, ಮುಕ್ತಾ ಪಶುಪತಿಮಠ ಇತರರಿದ್ದರು.