ಸಮ್ಮೇಳನವನ್ನು ವಿರೂಪಾಕ್ಷ ಮಾಮನಿ ಉದ್ಘಾಟಿಸಿದರು. ಬಿ.ವಿ.ಮಲಗೌಡರ, ಪ್ರೊ.ಡಾ.ಕೆ.ಶ್ರೀಕರುಣಾಕರನ್ ಇತರರಿದ್ದರು.
ನಗರದ ಕೆಎಲ್‌ಇ ಸಂಸ್ಥೆಯ ಎಸ್‌ವಿಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಹುಶಿಸ್ತೀಯ ದೃಷ್ಟಿಕೋನವಿಷಯಾಧಾರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು.
ಜಾಗತೀಕರಣ, ತಂತ್ರಜ್ಞಾನ ಮತ್ತು ವೇಗವಾಗಿ ನಡೆಯುತ್ತಿರುವ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಸಾಹಿತ್ಯ ಹಾಗೂ ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಹೊಸ ಸವಾಲು ಎದುರಾಗುತ್ತಿವೆ ಎಂದರು. ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾಮನಿ ಮಾತನಾಡಿ, ಶಿಕ್ಷಣವೇ ಸಮಾಜ ಪರಿವರ್ತನೆಯ ಮೂಲ ಶಕ್ತಿ. ವಿದ್ಯಾರ್ಥಿಗಳು ನಾವಿನ್ಯತೆಯ ಜ್ಞಾನ ಅಳವಡಿಸಿಕೊಂಡು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟೆ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಎಚ್.ಕಲ್ಲೂರ ಮಾತನಾಡಿದರು. ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ, ವಕೀಲ ಬಿ.ವಿ.ಮಲಗೌಡರ, ವಿಜಯಕುಮಾರ ಮೀಸಿ, ಡಾ.ಎನ್.ಎ.ಕೌಜಲಗಿ, ಡಾ.ಪಿ.ನಾಗರಾಜ, ಡಾ.ಎಂ.ನಂಜುಂಡಸ್ವಾಮಿ, ಮೊಹನ ಬಿ., ಡಾ.ಬಾಬುರಾಯಣ್ಣ ದೆಹ್ನೂರ, ಡಾ.ಲಕ್ಷ್ಮಣ ಸಂಕಗೋಳ, ಡಾ.ಮಂಜುನಾಥ ಚಲವಾದಿ, ಡಾ.ಸಂಜೋತಾ ಶಿರಸಂಗಿ, ಆಫ್ರೀನ್ ಹಳ್ಳೂರ, ಡಾ.ಎಚ್.ಬಿ.ಮಹಾಂತೇಶ, ಡಾ.ಅನಿಲಕುಮಾರ ಎಸ್.ಎಚ್., ಶಿವಾನಂದ ಹೋಳಿ, ಡಾ.ಅಜೀತ ಕದಂ, ಶಂಕರ ಹೂಗಾರ, ಡಾ.ಗೀತಾ ಮಲ್ಲಾಪುರ ಇತರರಿದ್ದರು. ಸ್ನೇಹಾ ಗಂಗಲ ನಿರೂಪಿಸಿದರು.